ಕಚೇರಿಯಲ್ಲಿ ಒಸಮಾ ಬಿನ್‌ ಲಾಡೆನ್‌ನ ಫೋಟೋ ಹಾಕಿಕೊಂಡ ಅಧಿಕಾರಿ!

masthmagaa.com:

ಸರ್ಕಾರಿ ವಿದ್ಯುತ್‌ ವಿತರಣಾ ಕಂಪನಿ ಒಂದ್ರಲ್ಲಿ ಉಗ್ರ ಹಾಗೂ ಅಲ್‌-ಖೈದಾ ಸಂಸ್ಥಾಪಕ ಒಸಮಾ ಬಿನ್‌ ಲಾಡೆನ್‌ ಫೋಟೊ ಹಾಕಿಕೊಂಡ ಸರ್ಕಾರಿ ಅಧಿಕಾರಿಯನ್ನ ಅಮಾನತುಗೊಳಿಸಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದಕ್ಷಿಣಾಂಚಲ್‌ ವಿದ್ಯುತ್‌ ವಿತರಣ್‌ ನಿಗಮ್‌ ಲಿಮಿಟೆಡ್‌ನ ಉಪ ವಿಭಾಗಾಧಿಕಾರಿ(SDO) ರವೀಂದ್ರ ಪ್ರಕಾಶ್‌ ಗೌತಮ್‌ ತಮ್ಮ ಕಚೇರಿಯಲ್ಲಿ ಬಿನ್‌ ಲಾಡೆನ್‌ ಫೋಟೊ ಹಾಕಿಕೊಂಡಿದ್ರು. ಅದ್ರ ಕೆಳಗೆ ʻಗೌರವಾನ್ವಿತ ಒಸಮಾ ಬಿನ್‌ ಲಾಡೆನ್‌, ವಿಶ್ವದ ಅತ್ಯುತ್ತಮ ಜೂನಿಯರ್‌ ಇಂಜಿನಿಯರ್‌ʼ ಅಂತ ಬರೆಯಲಾಗಿತ್ತು. ಈ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಂತ್ರ ಈ ಕ್ರಮವನ್ನ ತೆಗುಕೊಳ್ಳಲಾಗಿದೆ ಹಾಗೂ ಫೋಟೊವನ್ನ ಕಚೇರಿಯೊಂದ ತೆಗೆಯಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply