ಮೊದಲ ಬಾರಿ ಹೆಂಡತಿ ರಕ್ಷಿತಾಗೆ ಬಾಸ್‌ ಎಂದ ನಿರ್ದೇಶಕ ಪ್ರೇಮ್ !

masthmagaa.com:

ಕರ್ನಾಟಕ ರತ್ನ ಡಾ. ಪುನೀತ್‌ ರಾಜಕುಮಾರ್‌ ಅವರ ಮೊದಲ ಸಿನಿಮಾ ಬಿಡುಗಡೆಯಾಗಿ ಎಪ್ರಿಲ್‌ 26 ಕ್ಕೆ 21 ವರ್ಷಗಳಾದವು. 2002 ಏಪ್ರಿಲ್ 26 ಅಪ್ಪು ಅಭಿಮಾನಿಗಳು ಎಂದು ಮರೆಯಲಾಗದ ದಿನ. ಬಾಲನಟನಾಗಿ ಎಲ್ಲರ ತನುಮನ ಗೆದ್ದಂತಹ ಅಪ್ಪು ಬಹಳ ವರ್ಷಗಳ ನಂತರ ʻʻಅಪ್ಪುʼʼ ಸಿನಿಮಾ ಮೂಲಕ ರೀ ಎಂಟ್ರಿ ಕೊಟ್ಟರು. ಅಪ್ಪು ಸಿನಿಮಾ 175 ದಿನಗಳ ಕಾಲ ನಿರಂತರವಾಗಿ ಪ್ರದರ್ಶನ ಕಂಡಿತು. ಕನ್ನಡ ಚಿತ್ರರಂಗದ ಬಿಗ್​ ಹಿಟ್ ಎನಿಸಿಕೊಂಡಿತು. ಅಂದು ಸಿನಿಮಾದಲ್ಲಿ ಪುನೀತ್​ ತಾಲಿಬಾನ್ ಅಲ್ಲ ಅಲ್ಲ ಅಂತ ತೆರೆಯ ಮೇಲೆ ಕುಣಿದು ಕುಪ್ಪಳಿಸಿದ್ರು. ಇಡೀ ಥಿಯೇಟರ್​ನಲ್ಲಿ ಅಭಿಮಾನಿಗಳನ್ನು ಕುಣಿಸಿದ್ರು. ಅಲ್ಲಿಯವರೆಗೂ ಡ್ಯಾನ್ಸ್ ಅಂದ್ರೆ ಚಿರಂಜೀವಿ, ಪ್ರಭುದೇವ ಅಂತಿದ್ದೋರು ಸಹ ಅಪ್ಪು ಡ್ಯಾನ್ಸ್ ನೋಡಿ ಫಿದಾ ಆಗಿದ್ರು. ಇನ್ನು ಸಿನಿಮಾದಲ್ಲಿ ಅಪ್ಪು ಅವರು ತಮ್ಮ ಅದ್ಬುತ ನಟನೆಯಿಂದ ಮೋಡಿ ಮಾಡಿಬಿಟ್ಟರು. ಇನ್ನು ಈ ಸಿನಿಮಾದ ಶತದಿನೋತ್ಸವ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಆಕರ್ಷಣೆಯಾಗಿದ್ರು. ಈ ವೇಳೆ ಮಾತನಾಡಿದ ತಲೈವಾ ರಜನಿ, ಹುಲಿ ಹೊಟ್ಟೇಲಿ ಹುಲಿನೇ ಹುಟ್ಟೋದು. ನಾವೆಲ್ಲಾ ನೂರು ಸಿನಿಮಾಗಳನ್ನ ಮಾಡಿದ್ಮೇಲೆ ಅಭಿನಯದಲ್ಲಿ ಪಕ್ವವಾಗಿದ್ವಿ, ಆದ್ರೆ ಪುನೀತ್ ಮೊದಲ ಸಿನಿಮಾದಲ್ಲಿಯೇ ತಾನು ಎಂಥಾ ನಟ ಅಂತ ಪ್ರೂ ಮಾಡಿದ್ದಾನೆ ಅಂತ ರಜನಿಕಾಂತ್ ಮನಸಾರೆ ಕೊಂಡಾಡಿದ್ರು.

ಅಪ್ಪು ಸಿನಿಮಾದಲ್ಲಿ ಅಪ್ಪು ಅವರಿಗೆ ರಕ್ಷಿತಾ ಜೋಡಿಯಾಗಿದ್ದರು. ರಕ್ಷಿತಾ ʻಅಪ್ಪುʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಇವತ್ತಿಗೆ ರಕ್ಷಿತಾ ಅವರು ಸಿನಿಪಯಣ ಆರಂಭಿಸಿ 21 ವರ್ಷಗಳಾಗಿವೆ. ಈ ಬಗ್ಗೆ ರಕ್ಷಿತಾ ಅವರ ಪತಿ ಪ್ರೇಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ರಕ್ಷಿತಾ ಅವರಿಗೆ ಶುಭಾಶಯ ಹೇಳಿದ್ದಾರೆ. 21 ವರ್ಷಗಳಿಂದ ನಮ್ಮನ್ನೆಲ್ಲ ರಂಜಿಸಿದ್ದಕ್ಕೆ ಧನ್ಯವಾದಗಳು ರೆಬಲ್‌ ಲೇಡಿ, ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿರುವೆ, ನಿನ್ನ ಸಾಧನೆ ಹೀಗೆ ಮುಂದುವರೆಯಲಿ ಬಾಸ್‌ ಎಂದು ಪ್ರೇಮ ಬರೆದುಕೊಂಡಿದ್ದಾರೆ.

-masthmagaa.com

 

Contact Us for Advertisement

Leave a Reply