ಹೈಟಿ ಅಧ್ಯಕ್ಷರ ಹತ್ಯೆಯಲ್ಲಿ ಅಮರಿಕದ ಮಾಜಿ ಮಾಹಿತಿದಾರನ ಕೈವಾಡ

masthmagaa.com:

ಕಳೆದ ವಾರ ನಡೆದ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರೋರಲ್ಲಿ ಓರ್ವ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಶನ್​ನ ಮಾಜಿ ಮಾಹಿತಿದಾರ ಅಂತ ಹೈಟಿಯ ಡ್ರಗ್ ಎನ್​​ಫೋರ್ಸ್​ಮೆಂಟ್​ ಏಜೆನ್ಸಿ ಹೇಳಿದೆ. ಆದ್ರೆ ಹತ್ಯೆ ನಡೆಯೋ ಟೈಮಲ್ಲಿ ಈತ ಸಕ್ರಿಯ ಮಾಹಿತಿದಾರ ಆಗಿರಲಿಲ್ಲ ಅಂತ ಹೈಟಿ ಸರ್ಕಾರಿ ಮೂಲಗಳು ತಿಳಿಸಿವೆ. ಅಂದ್ಹಾಗೆ ಜೊವೆನೆಲ್​ ಮೋಯಿಸ್​ ಹತ್ಯೆ ಪ್ರಕರಣದಲ್ಲಿ ಮೂವರು ಹೈಟಿ-ಅಮೆರಿಕನ್ನರು ಮತ್ತು 26 ಕೊಲಂಬಿಯನ್ನರನ್ನ ಬಂಧಿಸಲಾಗಿತ್ತು. ಹತ್ಯೆಯಲ್ಲಿ ಹೈಟಿ-ಅಮೆರಿಕನ್ನರು ಯಾಕೆ ಭಾಗವಹಿಸಿದ್ರು ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಅಂತ ಅಮೆರಿಕ ಹೇಳಿದೆ. ಅಲ್ಲದೆ ತನಿಖೆಗೆ ಸಹಕಾರ ನಿಡುವಂತೆಯೂ ಹೈಟಿಗೆ ಮನವಿ ಮಾಡಿದೆ ಅಮೆರಿಕ.

-masthmagaa.com

Contact Us for Advertisement

Leave a Reply