ಬಿಎಂಟಿಸಿಗಳಲ್ಲಿ ಚಿಲ್ಲರೆ ಪರದಾಟದಿಂದ ಮುಕ್ತಿ! ಆನ್‌ಲೈನ್‌ ಮೂಲಕ ಹಣ ಪಾವತಿ!

masthmaga.com:

ಬಸ್‌ಗಳಲ್ಲಿ ಕಂಡೆಕ್ಟರ್‌ ಹಾಗೂ ಪ್ರಯಾಣಿಕರ ನಡುವಿನ ಚಿಲ್ಲರೆ ಜಟಾಪಟಿಯನ್ನ ಕೊನೆಗಾಣಿಸೋಕೆ ಬಿಎಂಟಿಸಿ ಮುಂದಾಗಿದೆ. ಈ ನಿಟ್ಟಿನಲ್ಲಿ ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನ ಜಾರಿಗೆ ತರ್ತಿದೆ. ಕೊರೊನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆ ಜಾರಿಗೊಳಿಸಿತ್ತು. ಆದ್ರೆ ಅನೇಕ ಸಮಸ್ಯೆಗಳು ಕಂಡುಬಂದದ್ರಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಜಾರಿ ಮಾಡಲು ಬಿಎಂಟಿಸಿ ಮುಂದಾಗಿದೆ. ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ಎಲೆಕ್ಟ್ರಿಕಲ್‌ ಟಿಕೆಟ್‌ ಮಷಿನ್ (ETM) ನೀಡ್ತಿದ್ದು, ಇದಕ್ಕೆ UPI ವ್ಯವಸ್ಥೆ ಅಳವಡಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಟಿಕೆಟ್​ಗಾಗಿ ಆನ್​ಲೈನ್ ಮೂಲಕ Google Pay, Phonepe ಬಳಸಿ ಹಣ ಪಾವತಿಸಬಹುದು.

-masthmagaa.com

Contact Us for Advertisement

Leave a Reply