ಬೆಲಾರುಸ್​ನಿಂದ ವಾಪಸ್ಸಾದ ಫ್ರಾನ್ಸ್ ರಾಯಭಾರಿ! ಯಾಕೆ ಗೊತ್ತಾ?

masthmagaa.com:

ಬೆಲಾರುಸ್​​ನಲ್ಲಿ ಫ್ರಾನ್ಸ್ ರಾಯಭಾರಿಯಾಗಿದ್ದ ನಿಕೋಲಸ್ ಡೇ ಲೊಕೋಸ್ಟೇ ವಾಪಸ್ಸಾಗಿದ್ದಾರೆ. ಸರ್ಕಾರ ಸೋಮವಾರದ ಒಳಗಾಗಿ ಬೆಲಾರುಸ್ ಬಿಟ್ಟು ಹೋಗಬೇಕು ಅಂತ ಸೂಚಿಸಿದ್ದರಿಂದ ಅವರು ಫ್ರಾನ್ಸ್​ಗೆ ವಾಪಸ್ ಬಂದಿದ್ದಾರೆ. ಈ ಬಗ್ಗೆ ಫ್ರಾನ್ಸ್ ರಾಯಭಾರಿ ಇಲಾಖೆ ವಕ್ತಾರೆ ಮಾಹಿತಿ ನೀಡಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಅವರನ್ನು ವಾಪಸ್ ಕಳುಹಿಸಲಾಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ. ಬೆಲಾರುಸ್​ ಮಾಧ್ಯಮಗಳ ಪ್ರಕಾರ ರಾಯಭಾರಿ ನಿಕೋಲಸ್ ಡೇ ಲೊಕೋಸ್ಟೇ ಬೆಲಾರುಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರನ್ನು ಭೇಟಿಯಾಗಿ ಕ್ರೆಡೆನ್ಶಿಯಲ್ ಕಾಪಿಗಳನ್ನು ನೀಡಿರಲಿಲ್ಲ. ಇದೇ ಕಾರಣಕ್ಕೆ ನಿಕೋಲಸ್​ ಡೇ ಅವ್ರನ್ನ ವಾಪಸ್ ಕಳುಹಿಸಲಾಗಿದೆ.

-masthmagaa.com

Contact Us for Advertisement

Leave a Reply