ನಮ್ಮ ಮದುವೆಗೂ ಕಾನೂನು ಮಾನ್ಯತೆ ನೀಡಿ: ಗೇ ದಂಪತಿ ಕೋರ್ಟ್‌ ಮೊರೆ!

masthmagaa.com:

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡ್ಬೇಕು ಅಂತ ಕೋರಿ ಸಲಿಂಗ ದಂಪತಿಯೊಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ತಮಗೆ ಮಾನ್ಯತೆ ನೀಡ್ಬೇಕು. ಶಾಸ್ತ್ರೋಕ್ತವಾಗಿ ಮದುವೆ ಆಗೋಕೆ ಅವಕಾಶ ನೀಡ್ಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದಾರೆ. LGBTQ+ ಸಮುದಾಯಕ್ಕೆ ಸೇರಿದವರು ತಮಗೆ ಇಷ್ಟವಾದ ವ್ಯಕ್ತಿಯ ಜೊತೆಗೆ ಮದುವೆ ಆಗೋ ಆಯ್ಕೆಯ ಹಕ್ಕನ್ನ ನೀಡ್ಬೇಕು ಅಂತ ಅರ್ಜಿಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ತಾವು ಪರಸ್ಪರ ಪ್ರೀತಿಸಿ 17 ವರ್ಷದಿಂದ ಒಟ್ಟಿಗೆ ಇದ್ರೂ ನಮ್ಮ ಮದುವೆಯನ್ನ ಪರಿಗಣಿಸೋ ಕಾನೂನು ಇಲ್ಲ. ಹಾಗೂ ನಾವು ಇಬ್ಬರು ಮಕ್ಕಳನ್ನ ಬೆಳೆಸುತ್ತಿದ್ದೇವೆ. ಆದ್ರೆ ಅವ್ರ ಜೊತೆ ನಮಗೆ ಪೋಷಕರ ಸಂಬಂಧ ಹೊಂದೋಕೆ ಅವಕಾಶ ಇಲ್ಲ ಅಂತ ಸಲಿಂಗ ದಂಪತಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

-masthmagaa.com

Contact Us for Advertisement

Leave a Reply