ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗೀತಾ ಶಿವರಾಜ್‌ಕುಮಾರ್‌!

masthmagaa.com:

ನಿರ್ಮಾಪಕಿ, ರಾಜಕಾರಣಿ ಗೀತಾ ಶಿವರಾಜ್‌ಕುಮಾರ್‌ ಅವರು ತುಂಬಾ ಸಿಂಪಲ್‌ ಆಗಿ ತಮ್ಮ ಬರ್ತ್‌ಡೇ ಅನ್ನ ಸೆಲಬ್ರೇಟ್‌ ಮಾಡಿಕೊಂಡಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರು ಕೇಕ್ ಕತ್ತರಿಸಿದ ಫೋಟೋ ವೈರಲ್ ಆಗಿದೆ. ಖುಷಿ ಖುಷಿಯಿಂದ ಗೀತಾ ಅವರು ಎಲ್ಲರಿಗೂ ಕೇಕ್ ತಿನ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್​ಕುಮಾರ್, ನಿರ್ಮಾಪಕ ಕೆಪಿ ಶ್ರೀಕಾಂತ್, ನಿರ್ದೇಶಕ ನರ್ತನ್ ಮೊದಲಾದವರು ಹಾಜರಿದ್ದರು.

ಇನ್ನು ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ‘ವೇದ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಮೊದಲ ನಿರ್ಮಾಣದಲ್ಲೇ ಅವರು ಗೆಲುವು ಕಂಡಿದ್ದಾರೆ.

-masthmagaa.com

Contact Us for Advertisement

Leave a Reply