ಚೀನಾದಲ್ಲಿದ್ದ ಜರ್ಮನಿ ರಾಯಭಾರಿ ಸಾವು! ಚೀನಾ ಸಂತಾಪ

masthmagaa.com:

ಚೀನಾದಲ್ಲಿದ್ದ ಜರ್ಮನಿಯ ರಾಯಭಾರಿ ಜಾನ್ ಹೆಕ್ಕರ್​​ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಇವರು ಚೀನಾ ರಾಯಭಾರಿಯಾಗಿ ಹೋಗಿ 2 ವಾರ ಮಾತ್ರ ಆಗಿತ್ತು. ಸಾವಿಗೆ ಕಾರಣ ಏನು ಅಂತ ಇನ್ನೂ ತಿಳಿದು ಬಂದಿಲ್ಲ. 54 ವರ್ಷದ ಹೆಕರ್​​, ಜರ್ಮನ್ ಚಾನ್ಸಲರ್ ಎಂಜೆಲಾ ಮರ್ಕೆಲ್​​ಗೂ ವಿದೇಶಾಂಗ ನೀತಿ ಸಲಹೆಗಾರರಾಗಿ ಕೆಲಸ ಮಾಡಿದ್ರು. ಆಗಸ್ಟ್​ 24ರಂದು ಜರ್ಮನ್ ರಾಯಭಾರಿಯಾಗಿ ಚೀನಾಗೆ ಹೋಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ, ವಾಂಗ್ ವೆನ್​ಬಿನ್​, ಹೆಕರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಜಾನ್ ಹೆಕರ್ ಸಾವಿನಿಂದ ನಮಗೆ ತುಂಬಾ ಆಘಾತವಾಗಿದೆ. ಯಾಕಂದ್ರೆ ಅವರು ರಾಯಭಾರಿಯಾಗಿ ಕೆಲಸ ಶುರು ಮಾಡಿದ ಬಳಿಕ ಜರ್ಮನಿ ಮತ್ತು ಚೀನಾ ನಡುವಿನ ಸಂಬಂಧ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ರು ಅಂತ ಹೇಳಿದ್ದಾರೆ. ಹೆಕರ್ ಅವರ ಕುಟುಂಬಕ್ಕೆ ಚೀನಾ ನೆರವು ನೀಡಲಿದೆ ಅಂತ ಕೂಡ ವಾಂಗ್​​​​​​ ವೆನ್​​​ಬಿನ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply