ಹಾಲಿ ಚಾಂಪಿಯನ್‌ ತಂಡವನ್ನ ಸೋಲಿಸಿ 2023ರ ಹಾಕಿ ವಿಶ್ವಕಪ್‌ ಗೆದ್ದ ಜರ್ಮನಿ!

masthmagaa.com:

ಒಡಿಶಾದ ಭುವನೇಶ್ವರದಲ್ಲಿ ನಡೆದ 2023ರ ಹಾಕಿ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಜರ್ಮನಿ ಹೊಸ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಳೆದ ಬಾರಿ ಚಾಂಪಿಯನ್‌ ಆಗಿದ್ದ ಬೆಲ್ಜಿಯಂ ತಂಡವನ್ನ ಸೋಲಿಸೊ ಮೂಲಕ ಜರ್ಮನಿ ಈ ಸಾಧನೆ ಮಾಡಿದೆ. ಜಿದ್ದಾಜಿದ್ದಿನಿ ಹೋರಾಟದಲ್ಲಿ 2 ತಂಡಗಳು ತಲಾ 3 ಗೋಲುಗಳನ್ನ ಗಳಿಸಿ ಸಮಬಲ ಸಾಧಿಸಿದ್ದವು. ಬಳಿಕ ಪೆನಾಲ್ಟಿ ಶೂಟೌಟ್‌ ನೀಡಲಾಗಿತ್ತು. ಪೆನಾಲ್ಟಿ ಶೂಟೌಟ್​​ನಲ್ಲಿ ಮೊದಲ 5 ಅವಕಾಶದಲ್ಲೂ ಉಭಯ ತಂಡಗಳು 3-3 ಗೋಲುಗಳಿಸಿ ಮತ್ತೆ ಸಮಬಲ ಸಾಧಿಸಿದವು. ಹೀಗಾಗಿ ಸಡನ್ ಡೆತ್ ಶೂಟೌಟ್ ಮೊರೆ ಹೋಗಲಾಯಿತು. ಈ ಶೂಟೌಟ್​ನ ಮೊದಲ ಅವಕಾಶದಲ್ಲಿ ಬೆಲ್ಜಿಯಂ ಹಾಗೂ ಜರ್ಮನಿ ಒಂದೊಂದು ಗೋಲು ಬಾರಿಸಿದವು. ಆದರೆ 2ನೇ ಅವಕಾಶದಲ್ಲಿ ಬೆಲ್ಜಿಯಂ ಅವಕಾಶ ಕೈಚೆಲ್ಲಿದರೆ, ಜರ್ಮನಿ ಗೋಲು ಬಾರಿಸಿ ದಾಖಲೆ ಬರೆಯಿತು. ಈ ಮೂಲಕ ಹಾಲಿ ಚಾಂಪಿಯನ್​ ಬೆಲ್ಜಿಯಂ ಅನ್ನು 5-4 ಅಂತರದಿಂದ ಸೋಲಿಸಿ ಜರ್ಮನಿ ತಂಡವು 2023ರ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು.

-masthmagaa.com

Contact Us for Advertisement

Leave a Reply