ಮನೆ ಮನೆಗೆ ಹೋಗಿ ವ್ಯಾಕ್ಸಿನ್ ಹಾಕಿ: ಪ್ರಧಾನಿ ಮೋದಿ

masthmagaa.com:

ಕೊರೋನಾ ಲಸಿಕೆಯನ್ನು ಮನೆ ಮನೆಯ ಬಾಗಿಲಿಗೆ ಹೋಗಿ ಹಾಕಬೇಕು ಅಂತ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಮೊದಲ ಡೋಸ್ ಮಾತ್ರವಲ್ಲ.. ಎರಡನೇ ಡೋಸ್​​ಗೂ ಅಷ್ಟೇ ಗಮನ ನೀಡಬೇಕು. ಈ ಅಭಿಯಾನಕ್ಕೆ ಧಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಎನ್​ಸಿಸಿ, ಎನ್​ಎಸ್ಎಸ್​​ನಂತರ ಯವ ಸಂಘಟನೆಗಳ ಸಹಾಯವನ್ನೂ ಪಡೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಇವತ್ತು ಪ್ರಧಾನಿ ಮೋದಿ ಮಹಾರಾಷ್ಟ್ರ ಸೇರಿದಂತೆ ಎಲ್ಲೆಲ್ಲಾ ಲಸಿಕೆ ಅಭಿಯಾನ 50 ಪರ್ಸೆಂಟ್​​ಗಿಂತಲೂ ಕಡಿಮೆ ಇದ್ಯೋ ಅಂಥಹ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಿದ್ರು. ಅಲ್ಲಿ ಈ ಮಾತುಗಳನ್ನಾಡಿದ್ದಾರೆ ಪ್ರಧಾನಿ ಮೋದಿ.

-masthmagaa.com

Contact Us for Advertisement

Leave a Reply