3 ವರ್ಷದಲ್ಲಿ 7,288 ಕೆಜಿ ಚಿನ್ನ ವಶ: ಲೋಕಸಭೆಯಲ್ಲಿ ಕೇಂದ್ರ ಮಾಹಿತಿ

masthmagaa.com:

ವಿದೇಶದಿಂದ ಬರೋ ಕೆಲವರು ಸಿಕ್ಕ ಸಿಕ್ಕಲ್ಲಿ ಚಿನ್ನ ಬಚ್ಟಿಟ್ಟುಕೊಂಡು ಬಂದು ಭಾರತಕ್ಕೆ ಅಕ್ರಮವಾಗಿ ಸಾಗಿಸ್ತಾರೆ. ಇದರಲ್ಲಿ ಕೆಲವರು ಏರ್​ಪೋರ್ಟ್​ಗಳಲ್ಲಿ ರೆಡ್ ಹ್ಯಾಂಡಾಂಗಿ ಸಿಕ್ಕಿ ಬೀಳ್ತಾರೆ. ಹೀಗೆ ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಒಟ್ಟು 7,288 ಕೆಜಿಯಷ್ಟು ಚಿನ್ನವನ್ನ Customs and Directorate of Revenue Intelligence ಸೀಜ್​ ಮಾಡಿದೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2019-20ರಲ್ಲಿ 3,600 ಕೆಜಿ, 2020-21ರಲ್ಲಿ 1900 ಕೆಜಿ ಮತ್ತು 2021-22ರಲ್ಲಿ 1700 ಕೆಜಿಯಷ್ಟು ಚಿನ್ನವನ್ನ ವಶಪಡಿಸಿಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply