ಗೂಗಲ್​​ಗೆ ಗುನ್ನ ಇಟ್ಟ ರಷ್ಯಾ! ಏನ್ ಮಾಡಿದೆ ಗೊತ್ತಾ?

masthmagaa.com:

ಕಾನೂನು ಪಾಲಿಸದ ಸೋಷಿಯಲ್ ಮೀಡಿಯಾ ಸಂಸ್ಥೆಗಳ ವಿರುದ್ಧ ರಷ್ಯಾ ಕಾನೂನು ಕ್ರಮಕ್ಕೆ ಮುಂದಾಗಿದೆ. ಗೂಗಲ್ ಸಂಸ್ಥೆಗೆ ವೈಯಕ್ತಿಕ ಮಾಹಿತಿ ಕಾನೂನು ಉಲ್ಲಂಘಿಸಿದ್ದಕ್ಕೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಟ್ವಿಟರ್ ಮತ್ತು ಫೇಸ್​ಬುಕ್ ವಿರುದ್ಧವೂ ಇದೇ ರೀತಿಯ ಕೇಸ್ ದಾಖಲಿಸಿಕೊಂಡಿದೆ. ಇನ್ನು ವಾಟ್ಸಾಪ್ ಸಂಸ್ಥೆಗೆ 10ರಿಂದ 60 ಲಕ್ಷ ರೂಪಾಯಿವರೆಗೆ ದಂಡ ವಿಧಿಸೋ ಸಾಧ್ಯತೆ ಇದೆ. ಅಂದಹಾಗೆ ರಷ್ಯಾ ಸೋಷಿಯಲ್ ಮೀಡಿಯಾಗಳಿಗೆ ದಂಡ ವಿಧಿಸೋದು ಇದೇನು ಹೊಸತೇನಲ್ಲ.. ಕೆಲವೊಂದು ಬ್ಯಾನ್​​ ಆಗಿರೋ ಕಂಟೆಂಟ್​​ಗಳನ್ನು ತೆಗೆಯಲಿಲ್ಲ ಅನ್ನೋ ಆರೋಪದಡಿ ಈವರೆಗೆ ಹಲವಾರು ಬಾರಿ ಸೋಷಿಯಲ್ ಮೀಡಿಯಾ ಸಂಸ್ಥೆಗಳ ಮೇಲೆ ದಂಡ ವಿಧಿಸಿದೆ. ನಾವಿಲ್ಲಿ ದಂಡದ ಮೊತ್ತ ರೂಪಾಯಿ ಲೆಕ್ಕದಲ್ಲೇ ಹೇಳಿದ್ದು ಯಾಕೆ ಅಂದ್ರೆ ರಷ್ಯಾ ರಬಲ್ಸ್​ ಮತ್ತು ಭಾರತದ ದುಡ್ಡಿನ ಮೌಲ್ಯ ಆಲ್ಮೋಸ್ಟ್​​​ ಸೇಮ್ ಇದೆ.

-masthmagaa.com

Contact Us for Advertisement

Leave a Reply