ಗೂಗಲ್‌ ಸಂಸ್ಥೆ ವಿರುದ್ಧ ಅದ್ರ ಉದ್ಯೋಗಿಗಳಿಂದಲೇ ಪ್ರತಿಭಟನೆ!

masthmagaa.com:

ಗಾಜಾದ ಬೆಂಕಿ ಮಿಡಲ್‌ ಈಸ್ಟ್‌ನಾದ್ಯಂತ ಯುದ್ಧದ ಜ್ವಾಲೆಯಾಗಿ ಹಬ್ತಿರೋ ನಡುವೆಯೇ ಈಗ ಕಾರ್ಪೋರೇಟ್‌ ವಲಯಕ್ಕೂ ಕಿಡಿ ತಾಗಿದೆ. ಇಸ್ರೇಲ್‌ ಜೊತೆಗಿನ ಒಪ್ಪಂದದ ವಿಚಾರವಾಗಿ ಈಗ ಗೂಗಲ್‌ ವಿರುದ್ಧ ಅಲ್ಲಿನ ಉದ್ಯೋಗಿಗಳೇ ಪ್ರತಿಭಟನೆ ನಡೆಸಿ ಅರೆಸ್ಟ್‌ ಆಗಿದ್ದಾರೆ. ಗೂಗಲ್‌, ಇಸ್ರೇಲ್‌ ಸರ್ಕಾರದೊಂದಿಗೆ 2021ರಲ್ಲಿ 1.2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 9.9 ಸಾವಿರ ಕೋಟಿ ರೂಪಾಯಿ ಒಪ್ಪಂದ ಒಂದನ್ನ ಮಾಡ್ಕೊಂಡಿತ್ತು. ಪ್ರಾಜೆಕ್ಟ್‌ ನಿಂಬಸ್‌ ಅನ್ನೋ ಈ ಒಪ್ಪಂದದಲ್ಲಿ ಗೂಗಲ್‌, ಅಮೇಜಾನ್‌ ಜೊತೆ ಸೇರ್ಕೊಂಡು ಇಸ್ರೇಲ್‌ ಸರ್ಕಾರಕ್ಕೆ ಕ್ಲೌಡ್‌ ಮತ್ತು ಡೇಟಾ ಸೆಂಟರ್‌ ಸೇವೆ ಹಾಗು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸೇವೆಯನ್ನ ನೀಡ್ತಿತ್ತು. ಆದ್ರೆ ಇಸ್ರೇಲ್‌ ಸರ್ಕಾರ ಪ್ಯಾಲೆಸ್ತೇನಿಯರ ನರಮೇಧ ನಡೆಸ್ತಿದೆ. ಇದಕ್ಕೆ ಗೂಗಲ್‌ನ ಟೆಕ್‌ ನೆರವು ನೀಡ್ತಿದೆ. ತಮ್ಮ ಕೆಲಸ ಹತ್ಯಾಕಾಂಡಕ್ಕೆ ಕಾರಣವಾಗ್ತಿದೆ. ಹಲವಾರು ಉದ್ಯೋಗಿಗಳ ಮೆಂಟಲ್‌ ಹೆಲ್ತ್‌ ಹಾಳಾಗಿದೆ. ಹಾಗಾಗಿ ಕೂಡ ಇಸ್ರೇಲ್‌ ಸರ್ಕಾರದ ಜೊತೆಗಿನ ಈ ಒಪ್ಪಂದವನ್ನ ಮುರಿದುಕೊಳ್ಳಬೇಕು ಅಂತ ಗೂಗಲ್‌ ಸಂಸ್ಥೆಯ ನೌಕರರೇ ನ್ಯೂಯಾರ್ಕ್‌ ಮತ್ತು ಕ್ಯಾಲಿಫೋರ್ನಿಯಾ ಕಚೇರಿಗಳಲ್ಲಿ ಧರಣಿ ನಡೆಸಿದ್ದಾರೆ. ಹೀಗಾಗಿ ಈಗ 9 ಜನರನ್ನ ಅರೆಸ್ಟ್‌ ಮಾಡಲಾಗಿದೆ. ಅಲ್ಲದೇ 28 ಜನ ಉದ್ಯೋಗಿಗಳನ್ನ ಗೂಗಲ್‌ ಕೆಲಸದಿಂದ ತೆಗೆದು ಹಾಕಿದೆ. ಇನ್ನು ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಗೂಗಲ್‌, ʻನಾವು ಇಂತಹ ವರ್ತನೆಯನ್ನ ಸಹಿಸಲ್ಲ. ಪ್ರತಿಭಟನೆ ನಡೆಸ್ತಿರೋ ನೌಕರರು ಇತರ ನೌಕರರಿಗೆ ಡಿಸ್ಟರ್ಬ್‌ ಮಾಡ್ತಿದ್ದಾರೆ. ಅಪಾಯ ಒಡ್ತಿದ್ದಾರೆ. ಹೀಗಾಗಿ 28 ಜನರನ್ನ ವಜಾ ಮಾಡಲಾಗಿದೆʼ ಅಂತೇಳಿದೆ. ಮತ್ತೊಂದು ವರದಿ ಪ್ರಕಾರ ಗೂಗಲ್‌ ವಕ್ತಾರರೊಬ್ರು ʻಪ್ರಾಜೆಕ್ಟ್‌ ನಿಂಬಸ್‌, ಇಸ್ರೇಲ್‌ ಸರ್ಕಾರದ ವರ್ಕ್‌ ಲೋಡ್‌ ಕಡಿಮೆ ಮಾಡಲು ಮಾಡ್ಕೊಂಡಿರೋ ಒಪ್ಪಂದ. ಇದ್ರಲ್ಲಿ ನಾವು ಮಿಲಿಟರಿ…ಶಸ್ತ್ರಾಸ್ತ್ರಗಳಂತಹ ಸೆನ್ಸಿಟಿವ್‌ ಫೀಲ್ಡ್‌ಗಳಲ್ಲಿ ಕೆಲಸ ಮಾಡ್ತಿಲ್ಲ. ಏನಿದ್ರೂ ಹೆಲ್ತ್‌, ಫಿನಾನ್ಸ್‌ನಂತಹ ಕ್ಷೇತ್ರಗಳಲ್ಲಿ ನೆರವು ನೀಡ್ತಿದ್ದೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply