ಉತ್ತರಪ್ರದೇಶದಲ್ಲಿ ಮತದಾರರ ಮನೆ ಮನೆಗೆ ಹೋದ ಅಮಿತ್ ಶಾ

masthmagaa.com:

ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆ ಮನೆ ಪ್ರಚಾರ ಮಾಡ್ತಿದ್ದಾರೆ. ಕೋವಿಡ್ ನಿಂದಾಗಿ ಬೃಹತ್ ರ್ಯಾಲಿಗಳಿಗೆ ಅವಕಾಶ ಇಲ್ಲದ ಕಾರಣಕ್ಕೆ ಸಣ್ಣ ಸಣ್ಣ ಸಭೆಗಳು, ದೇಗುಲ ಭೇಟಿ ಮೂಲಕ ರಾಜಕೀಯ ಸಂದೇಶ ರವಾನೆ ಮಾಡ್ತಿದ್ದಾರೆ. ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಪ್ರಾಬಲ್ಯದ ಏರಿಯಾಗಳಲ್ಲಿ ಅಮಿತ್ ಶಾ ಜಾಸ್ತಿ ಫೋಕಸ್ ಮಡ್ತಿದ್ದಾರೆ. ಇವತ್ತು ವಿಶೇಷವಾಗಿ ಮಥುರಾದಲ್ಲಿ ಅಮಿತ್ ಶಾ ಬೀದಿ ಬೀದಿಗಳಲ್ಲಿ ಓಡಾಡಿದ್ರು. ಈ ಭಾಗದ 137 ಸೀಟುಗಳಲ್ಲಿ ಜಾಟ್ ಸಮುದಾಯದ ಪ್ರಾಬಲ್ಯ ಇದೆ. ಇದರಲ್ಲಿ ಕಳೆದ ಬಾರಿ 110 ಸೀಟು ಬಿಜೆಪಿ ಗೆದ್ದಿತ್ತು. SPಯ ಅಖಿಲೇಶ್ ಸಿಎಂ ಆಗಿದ್ದಾಗ ನಡೆದಿದ್ದ ಮುಜಫರ್‌ ನಗರ ದಂಗೆಯಿಂದಾಗಿ ಜಾಟರು ಸಾಲಿಡ್ಡಾಗಿ ಬಿಜೆಪಿಗೆ ಓಟ್ ಹಾಕಿದ್ದರು. ಆದ್ರೆ ಈ ಸಲ ಈ ವೋಟುಗಳಿಗಾಗಿ ಬಿಜೆಪಿ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಕೇಂದ್ರ ಸರ್ಕಾರದ 3 ಕೃಷಿ ಸುಧಾರಣಾ ಮಸೂದೆಗಳನ್ನ ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಈ ಭಾಗದ ಜಾಟರು ಹಾಗೂ ಜಾಟ್ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದವು. ಇಡೀ ವರ್ಷದ ಪ್ರತಿಭಟನೆಯಲ್ಲಿ 700ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದರು. ಇದೇ ಸಿಟ್ಟಿನ ಲಾಭ ಪಡೆದುಕೊಳ್ಳೋಕೆ ಅಖಿಲೇಶ್ ಯಾದವ್ರ SP ಟ್ರೈ ಮಾಡ್ತಿದೆ. ಜಾಟ್ ಮತಗಳನ್ನ ಸೆಳೆಯೋಕೆ ಅಂತಾನೇ ಜಾಟ್ ಪಕ್ಷವಾದ RLD ಜೊತೆ SP ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಈ ಪ್ರದೇಶ ಈಗ ಬಿರುಸಿನ ಕಾಳಗಕ್ಕೆ ರೆಡಿಯಾಗ್ತಿದೆ.

-masthmagaa.com

Contact Us for Advertisement

Leave a Reply