ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಮೇಲೆ ಟ್ಯಾಕ್ಸ್​ ಕಡಿತ: ಎಷ್ಟು ಗೊತ್ತಾ?

masthmagaa.com:

ಭಾರತದ ಮಾರುಕಟ್ಟೆಗೆ ಟೆಸ್ಲಾದ ಎಲೆಕ್ಟ್ರಿಕ್ ಕಾರು ಪ್ರವೇಶಕ್ಕೆ ದಾರಿ ಸುಗಮಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ವರ್ಷದ ಹಿಂದೆಯೇ ಎಲಾನ್ ಮಸ್ಕ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಅತಿ ಶೀಘ್ರದಲ್ಲಿ ಲಭ್ಯವಾಗಲಿದೆ ಅಂದಿದ್ರು. ಆದ್ರೆ ವಿದೇಶಿ ಕಾರುಗಳಿಗೆ ಭಾರತದಲ್ಲಿ ವಿಪರೀತ ತೆರಿಗೆ ಇದೆ. ಹೀಗಾಗಿ ಇನ್ನು ಯಾಕೆ ಬಂದಿಲ್ಲಾ ಮಸ್ಕ್ ಸಾಹೇಬ್ರೆ ನಿಮ್ಮ ಟೆಸ್ಲಾ ಕಾರು ಅಂತ ಕೇಳಿದಾಗ ಎಲಾನ್ ಮಸ್ಕ್ ಕೂಡ ತೆರಿಗೆಯ ವಿಚಾರವನ್ನೇ ಹೈಲೆಟ್ ಮಾಡಿದ್ರು. ಭಾರತ ಗ್ರೀನ್ ಎನರ್ಜಿ ವಾಹನಗಳಿಗೆ ಬೆಂಬಲ ಕೊಡುತ್ತೆ ಅಂತ ಅಂದುಕೊಂಡಿದ್ವಿ. ಆದ್ರೆ ವಿಪರೀತ ತೆರಿಗೆಯಿಂದಾಗಿ ವಿಳಂಬವಾಗ್ತಿದೆ ಅಂತ ಮಸ್ಕ್ ಹೇಳಿದ್ರು. ಹೀಗಾಗಿ ಈಗ ಸರ್ಕಾರ ಎಲೆಕ್ಟ್ರಿಕ್ ಕಾರುಗಳ ಆಮದಿನ ಮೇಲಿನ ತೆರಿಗೆಯನ್ನು ಕಮ್ಮಿ ಮಾಡಲು ಮುಂದಾಗಿದೆ ಅಂತ ಮಾಹಿತಿ ಬರ್ತಿದೆ. ಹಾಗಂತ ತುಂಬಾ ಕಮ್ಮಿ ಮಾಡ್ತಿದ್ದಾರೆ ಅನ್ಕೋಬೇಡಿ..ಇದುವರೆಗೆ 60 ಪರ್ಸೆಂಟ್ ಟ್ಯಾಕ್ಸ್ ಇದೆ. ಅದನ್ನ 20 ಪರ್ಸೆಂಟ್ ಕಮ್ಮಿ ಮಾಡಿ 40 ಪರ್ಸೆಂಟ್​​ಗೆ ಇಳಿಸಲು ಪ್ಲಾನ್ ಮಾಡ್ತಿದೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply