ಕೃಷಿ ಮಸೂದೆ ವಾಪಸ್ ಪಡೆಯಿರಿ: ಸರ್ಕಾರಕ್ಕೆ ಮಾಜಿ ಅಧಿಕಾರಿಗಳ ಪತ್ರ

masthmagaa.com:

ದೆಹಲಿ: ರೈತರ ಪ್ರತಿಭಟನೆ ವಿಚಾರವಾಗಿ ಮಾಜಿ ಸಿವಿಲ್ ಸರ್ವೆಂಟ್​​​ಗಳ ಒಂದು ಗುಂಪು ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದೆ. ಕೃಷಿ ಕಾನೂನಿನ ವಿಚಾರವಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರದ ಪ್ರತಿಕ್ರಿಯೆ ಮೊದಲಿನಿಂದಲೂ ಸಂಘರ್ಷದಿಂದಲೇ ಕೂಡಿದೆ. ರೈತರನ್ನು ಜವಾಬ್ದಾರಿರಹಿತ ಪ್ರತಿಸ್ಪರ್ಧಿಗಳಂತೆ ನೋಡಲಾಗ್ತಿದೆ. ರೈತರ ಪ್ರತಿಭಟನೆಯನ್ನು ರಾಕ್ಷಸೀಕರಣಗೊಳಿಸಿ ರೈತರ ಗೌರವಕ್ಕೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ. ಜೊತೆಗೆ ಪ್ರತಿಭಟಿಸುತ್ತಿರೋ ರೈತರನ್ನು ಸೋಲಿಸಲು ಕೂಡ ಯತ್ನಿಸಲಾಗ್ತಿದೆ ಅಂತ ಪತ್ರದಲ್ಲಿ ಹೇಳಲಾಗಿದೆ.

ಕೇಂದ್ರ ಸರ್ಕಾರದ ಇಂತಹ ನಿಲುವುಗಳಿಂದ ಸಮಸ್ಯೆ ಪರಿಹಾರವಾಗೋದಿಲ್ಲ. ಸರ್ಕಾರ ರೈತರಿಗೆ ಸ್ಪಂದಿಸುವ ಉದ್ದೇಶ ಹೊಂದಿದ್ದರೆ ಅರ್ಧ ಮನಸ್ಸಿನಿಂದ ಹೆಜ್ಜೆ ಇಡೋ ಬದಲು, ಕೃಷಿ ಕಾನೂನನ್ನು ವಾಪಸ್ ಪಡೆದುಕೊಳ್ಳಬೇಕು ಅಂತ ಒತ್ತಾಯಿಸಲಾಗಿದೆ. ಡಿಸೆಂಬರ್ 12ರಂದೇ ನಾವು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ವಿ. ಆದ್ರೆ ನಂತರ ನಡೆದ ಬೆಳವಣಿಗೆಗಳಿಂದ ರೈತರಿಗೆ ಅನ್ಯಾಯವಾಗಿದೆ.. ನಿರಂತವಾಗಿ ಅನ್ಯಾಯವಾಗುತ್ತಲೇ ಇದೆ ಅನ್ನೋ ನಮ್ಮ ವಿಚಾರ ಮತ್ತಷ್ಟು ದೃಢವಾಗಿದೆ. ಕೇಂದ್ರ ಸರ್ಕಾರ ಹಲವು ತಿಂಗಳುಗಳಿಂದ ದೇಶದಲ್ಲಿ ಸೃಷ್ಟಿಯಾಗಿರುವ ಅಶಾಂತಿಯನ್ನು ಸರಿಪಡಿಸಲು ಮಹತ್ವದ ಹೆಜ್ಜೆ ಇಡಬೇಕು ಅಂತ  ಹೇಳಿದ್ದಾರೆ.  ಈ ಪತ್ರದಲ್ಲಿ 75 ಮಂದಿಯ ಸಹಿ ಇದ್ದು, ಇವರೆಲ್ಲರೂ ಕಾನ್​​​ಸ್ಟಿಟ್ಯೂಷನಲ್ ಕಂಡಕ್ಟ್​ ಗ್ರೂಪ್​​ನ ಸದಸ್ಯರಾಗಿದ್ದಾರೆ. ಇವರಲ್ಲಿ ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್​, ಮುಂಬೈ ಮಾಜಿ ಪೊಲೀಸ್ ಕಮಿಷನರ್​​ ಜುಲಿಯೋ ರಿಬೇರಿಯಾ ಕೂಡ ಸೇರಿದ್ದಾರೆ.

-masthmagaa.com

Contact Us for Advertisement

Leave a Reply