ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ​ ಗಡುವು ಜನವರಿ 10ಕ್ಕೆ ವಿಸ್ತರಣೆ

masthmagaa.com:

ಕೊರೋನಾ ಹಾವಳಿ ಹಿನ್ನೆಲೆ 2020ರ ಆರ್ಥಿಕ ವರ್ಷದ ಇನ್​ಕಂ ಟ್ಯಾಕ್ಸ್ ರಿಟರ್ನ್ಸ್​​ ಸಲ್ಲಿಸಲು ಇದ್ದ ಕೊನೇ ದಿನಾಂಕವನ್ನ ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಡೆಡ್​ಲೈನ್​ ಅನ್ನು ಜನವರಿ 10ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಡಿಸೆಂಬರ್ 30 ಕೊನೇ ದಿನಾಂಕವಾಗಿತ್ತು. ಯಾವುದಾದ್ರೂ ವ್ಯಕ್ತಿ ITR ಸಲ್ಲಿಸೋದಾದ್ರೆ ಈ ಡೇಟ್​. ಇನ್ನು ಯಾವುದಾದ್ರೂ ಕಂಪನಿ ITR ಸಲ್ಲಿಸಬೇಕು ಅಂದ್ರೆ ಅವರಿಗೆ ಫೆಬ್ರವರಿ 15ರವರಗೆ ಟೈಂ ಇರುತ್ತೆ. 2020-21 ಅಸೆಸ್​ಮೆಂಟ್ ಇಯರ್​ನ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಗಳನ್ನ ಆಡಿಟ್​ ಮಾಡಿಸಿಕೊಳ್ಳಲು ಇದ್ದ ಡೆಡ್​ಲೈನ್ ಅನ್ನು ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿದೆ.

-masthmagaa.com

Contact Us for Advertisement

Leave a Reply