masthmagaa.com:

ಕೊರೋನಾ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧವನ್ನ 2021ರ ಜನವರಿ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅಂದ್ಹಾಗೆ ಮಾರ್ಚ್ 22ರಿಂದಲೇ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಬಂದ್ ಆಗಿದೆ. ಆದ್ರೆ ಕೊರೋನಾ ಹಾವಳಿ ಕಮ್ಮಿಯಾದಂತೆ ವಿವಿಧ ದೇಶಗಳೊಂದಿಗೆ ಭಾರತ ಏರ್​ ಬಬಲ್ ವ್ಯವಸ್ಥೆ ಮಾಡಿಕೊಂಡಿದೆ. ಈ ಒಪ್ಪಂದ ಮಾಡಿಕೊಂಡ ದೇಶಗಳ ಮಧ್ಯೆ ಮಾತ್ರ ಅಂತಾರಾಷ್ಟ್ರೀಯ ವಿಮಾನ ಸಂಚಾರ ಇರುತ್ತೆ. ಇದರ ಜೊತೆಗೆ ಸರಕು ವಿಮಾನಗಳು ಮತ್ತು DGCA ಅನುಮತಿ ನೀಡಿದ ವಿಶೇಷ ವಿಮಾನಗಳಿಗೆ ಯಾವುದೇ ನಿರ್ಬಂಧ ಇರೋದಿಲ್ಲ. ಉಳಿದಂತೆ ಬೇರೆ ಯಾವುದೇ ದೇಶದ ವಿಮಾನ ಭಾರತಕ್ಕೆ ಬರುವಂತಿಲ್ಲ ಮತ್ತು ಭಾರತದಿಂದ ಯಾವುದೇ ವಿಮಾನ ಹೋಗುವಂತಿಲ್ಲ.

-masthmagaa.com

Contact Us for Advertisement

Leave a Reply