ಇವರು ಮೋದಿಗೆ ರೈತರ ಉದ್ಧಾರಕ್ಕಿಂತ ರಾಜಕೀಯ ಮುಖ್ಯವಾಯ್ತು ಅಂದಿದ್ಯಾಕೆ?

masthmagaa.com:

ಇನ್ನು ಕೃಷಿ ಕಾನೂನುಗಳ ಬಗ್ಗೆ ಅಧ್ಯಯನಕ್ಕೆ ಸುಪ್ರೀಂಕೋರ್ಟ್​​​​ನಿಂದ ರಚನೆಯಾಗಿದ್ದ ಸಮಿತಿ ಸದಸ್ಯ ಅನಿಲ್ ಘನವಂತ್ ಕೇಂದ್ರ ಸರ್ಕಾರದ ಹೆಜ್ಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಈ ನಿರ್ಧಾರದ ಮೂಲಕ ರೈತರ ಅಭಿವೃದ್ಧಿ ಮತ್ತು ರಾಜಕೀಯದಲ್ಲಿ ರಾಜಕೀಯವನ್ನು ಆರಿಸಿಕೊಂಡಂತಾಗಿದೆ. ನಾವು ಈಗಗಲೇ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದೀವಿ. ಅದ್ರಲ್ಲಿ ಹಲವು ತಿದ್ದುಪಡಿ ಮತ್ತು ಪರಿಹಾರಗಳನ್ನು ಸೂಚಿಸಿದ್ವಿ. ಅದರ ಮೂಲಕ ಸಮಸ್ಯೆ ಬಗೆಹರಿಸೋ ಬದಲು ಕೇಂದ್ರ ಸರ್ಕಾರ ಈ ರೀತಿ ಹಿಂದೆ ಹೆಜ್ಜೆ ಇಟ್ಟಿದೆ. ಯಾಕಂದ್ರೆ ಅವರಿಗೆ ಚುನಾವಣೆ ಗೆಲ್ಲೋದೇ ಮುಖ್ಯ ಅಂತ ಹೇಳಿದ್ದಾರೆ. ಅಂದಹಾಗೆ ಈ ಸಮಿತಿ ಮಾರ್ಚ್​ 19ರಂದೇ ವರದಿ ಸಲ್ಲಿಸಿತ್ತು. ಸೆಪ್ಟೆಂಬರ್ 1ರಂದು ಘನವಂತ್​​​ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ವರದಿಯನ್ನು ಸಾರ್ವಜನಿಕಗೊಳಿಸುವಂತೆ ಮನವಿ ಮಾಡಿದ್ರು. ಆದ್ರೆ ಈ ವರದಿಯನ್ನು ಸಾರ್ವಜನಿಕಗೊಳಿಸಲಿಲ್ಲ.

-masthmagaa.com

Contact Us for Advertisement

Leave a Reply