ಜನವರಿ 26 ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ ಈಜಿಪ್ಟ್‌ ಅಧ್ಯಕ್ಷ!

masthmagaa.com:

74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳೋಕೆ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌ಸಿಸಿ ಅವ್ರು ಭಾರತಕ್ಕೆ ಬಂದಿದ್ದಾರೆ. ಅಬ್ದೆಲ್‌ ಅವ್ರನ್ನ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ಸ್ವಾಗತಿಸಿದ್ದಾರೆ. ಭಾರತ ಸರ್ಕಾರ ಹಾಗೂ ಭಾರತೀಯರಿಗೆ ನಾನು ಅಭಿನಂದನೆಯನ್ನ ಸಲ್ಲಿಸ್ತೇನೆ. ಹಾಗೂ ಮಹತ್ವದ ದಿನದಂದು ಗೌರವಾನ್ವಿತ ಅತಿಥಿಯಾಗ್ತಿರೋದು ನನ್ನ ಭಾಗ್ಯ. ಈ ಭೇಟಿಯಿಂದ ಭಾರತ ಮತ್ತು ಈಜಿಪ್ಟ್‌ ನಡುವಿನ ದ್ವಿಪಕ್ಷೀಯ ಸಂಬಂಧ ಹೊಸ ಹಂತಕ್ಕೆ ಹೋಗುತ್ತೆ ಅಂತ ನಾನು ಭಾವಿಸುತ್ತೇನೆ. ಜೊತೆಗೆ ಭಾರತದ ಸುಸ್ಥಿರ ಅಭಿವೃದ್ಧಿಗಳನ್ನ ಗೌರವದಿಂದ ನೋಡ್ತೇನೆ ಅಂತ ಅಬ್ದೆಲ್‌ ಹೇಳಿದ್ದಾರೆ. ನಂತ್ರ ಪ್ರಧಾನಿ ಮೋದಿ ಮತ್ತು ಅಬ್ದೆಲ್‌ ಸಭೆ ನಡೆಸಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳು ಭಯೋತ್ಪಾದನೆ ಬಗ್ಗೆ ಕಳವಳ ಹೊಂದಿವೆ ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೋರಾಡೋಕೆ ಅಗತ್ಯ ಕ್ರಮ ಕೈಗೊಳ್ಳೋಕೆ ನಾವು ರೆಡಿ ಇದೀವಿ ಅಂತ ಮೋದಿ ಹೇಳಿದ್ದಾರೆ. ಅಂದ್ಹಾಗೆ 2014ರಲ್ಲಿ ಈಜಿಪ್ಟ್‌ ಅಧ್ಯಕ್ಷರಾದ ನಂತ್ರ ಇದೇ ಮೊದಲ ಬಾರಿಗೆ ಅಬ್ದೆಲ್‌ ಭಾರತಕ್ಕೆ ಬಂದಿದ್ದಾರೆ. ಇದೇ ವೇಳೆ ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನ ಆಚರಿಸುತ್ತಿವೆ.

-masthmagaa.com

Contact Us for Advertisement

Leave a Reply