ಕ್ರಿಕೆಟ್​​ಗೆ ಭಜ್ಜಿ ಗುಡ್​​ಬೈ: ಎರಡನೇ ಇನ್ನಿಂಗ್ಸ್​ ಎಂದ ‘ದೂಸ್ರಾ ಕಿಂಗ್​’!

masthmagaa.com:

ಪಂಜಾಬ್ ಚುನಾವಣೆ ಹೊತ್ತಲ್ಲೇ ಮಾಜಿ ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್​ ಎಲ್ಲಾ ಮಾದರಿಯ ಕ್ರಿಕೆಟ್​​​ಗೆ ವಿದಾಯ ಹೇಳಿದ್ದಾರೆ. ಇಂಟರ್​ನೆಟ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿ ಕ್ರಿಕೆಟ್ ಬಗ್ಗೆ ಮಾತಾಡಿರೋ ಅವರು, ನಾನು ಇವತ್ತು ಏನೇ ಇದ್ರು ಅದು ಕ್ರಿಕೆಟ್​​ನಿಂದ.. ಇದೀಗ ಜೀವನದಲ್ಲಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡ್ತಿದ್ದೀನಿ ಅಂತ ಕೂಡ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಹರ್​​ಭಜನ್ ಸಿಂಗ್ ಜೊತೆಗಿನ ಫೋಟೋ ಟ್ವೀಟ್ ಮಾಡಿದ್ರು. ಇದ್ರ ಬೆನ್ನಲ್ಲೇ ಹರ್​ಭಜನ್ ಸಿಂಗ್ ಕ್ರಿಕೆಟ್​​​ಗೆ ಗುಡ್​ಬೈ ಹೇಳಿದ್ದಾರೆ. ಅಂದಹಾಗೆ 2000ನೇ ಇಸವಿಯಿಂದ ಟೀಂ ಇಂಡಿಯಾದ ಭಾಗವಾಗಿದ್ದ ಹರ್​​ಭಜನ್ ಸಿಂಗ್​​​​​​, 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ರು. ಇನ್ನು 103 ಟೆಸ್ಟ್​ ಮ್ಯಾಚ್​ನಲ್ಲಿ 417 ಮತ್ತು 234 ಏಕದಿನ ಪಂದ್ಯದಲ್ಲಿ 269 ವಿಕೆಟ್ ಪಡೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply