ಹಾರ್ದಿಕ್‌ ಮೊಣಕಾಲಿಗೆ ಏಟು: ನ್ಯೂಜಿಲೆಂಡ್‌ ವಿರುದ್ಧದ ಮ್ಯಾಚ್‌ನಿಂದ ಔಟ್‌

masthmagaa.com:

ಅಕ್ಟೋಬರ್‌ 22 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರೋ ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಮ್ಯಾಚ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಗೈರಾಗಲಿದ್ದಾರೆ. ನಿನ್ನೆ ಪುಣೆಯಲ್ಲಿ ನಡೆದ ಬಾಂಗ್ಲಾದೇಶ್‌ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್‌ ಅವರ ಎಡ ಬದಿಯ ಮೊಣಕಾಲಿಗೆ ತೀವ್ರವಾಗಿ ಏಟಾಗಿದೆ. ಈ ಕಾರಣದಿಂದ ಮುಂಬರುವ ನ್ಯೂ ಜೀಲ್ಯಾಂಡ್‌ ವಿರುದ್ಧದ ಮ್ಯಾಚ್‌ನಲ್ಲಿ ಹಾರ್ದಿಕ್‌ ಪಾಂಡ್ಯಗೆ ಭಾಗವಹಿಸಲು ಆಗುತ್ತಿಲ್ಲ. ಆದ್ರೆ ಅಕ್ಟೋಬರ್‌ 29ರಂದು ಲಕ್ನೋದಲ್ಲಿ ನಡೆಯಲಿರೋ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಅಂತ BCCI ಹೇಳಿದೆ.

-masthmagaa.com

Contact Us for Advertisement

Leave a Reply