ಸರ್‌ನೇಮ್‌ ಇಲ್ಲಾ ಅಂದ್ರೆ ಯುಎಇಗೆ ನೋ ಎಂಟ್ರಿ!

masthmagaa.com:

ನಿಮಗೆ ಕೇವಲ ಒಂದೆ ಹೆಸರಿದ್ದು, ಯುಎಇಗೆ ಪ್ರಯಾಣ ಬೆಳೆಸ್ಬೇಕು ಅಂತ ಎನಾದ್ರು ಪ್ಲಾನ್‌ ಇದ್ರೆ ಈಗ್ಲೆ ನಿಮ್ಮ ಹೆಸರಿನ ಪಕ್ಕ ಸರ್‌ನೇಮ್‌ ಸೇರ್ಸ್ಕೊಂಡ್‌ಬಿಡಿ. ಯಾಕಂದ್ರೆ ಯಾವುದೇ ರೀತಿಯ ವೀಸಾದಲ್ಲಿ ಹೆಸರನ್ನ ಮಾತ್ರ ಹೊಂದಿರೋ ಪ್ರಯಾಣಿಕರಿಗೆ ಪ್ರವಾಸ, ವಿಸಿಟ್‌ ಮಾಡೋಕೆ ಅನುಮತಿ ನೀಡಲ್ಲ ಅಂತ ಯುಎಇ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಯಮ ನವೆಂಬರ್‌ 21ರಿಂದ ಜಾರಿಗೆ ಬಂದಿದ್ದು, ಮೊದಲ ಹೆಸರಿನ ಜೊತೆ ಸರ್‌ನೇಮ್‌ ಇರೋದ್ನ ಕಡ್ಡಾಯ ಮಾಡಲಾಗಿದೆ. ಆದ್ರೂ ಪಾಸ್‌ಪೋರ್ಟ್‌ನಲ್ಲಿ ಮತ್ತು ಪರ್ಮನೆಂಟ್‌ ರೆಸಿಡೆನ್ಸ್‌ ಅಥ್ವಾ ಉದ್ಯೋಗಿ ವೀಸಾಗಳಲ್ಲಿ ಸರ್‌ನೇಮ್‌ ಇಲ್ದೆ ಕೇವಲ ಹೆಸರು ಇರೋರು ಅದೇ ಹೆಸರನ್ನ ಬೇಕಾದ್ರೆ ಸರ್‌ನೇಮ್‌ ಆಗಿ ಅಪ್‌ಡೇಟ್‌ ಮಾಡ್ಸಿ ಯುಎಇಗೆ ಹೋಗಲು ಅನುಮತಿ ನೀಡಲಾಗಿದೆ ಅಂತ ಸೂಚನೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply