‘ನೃತ್ಯ ಮಾಡುತ್ತಾ ಒಳ ಉಡುಪು ಬಿಚ್ಚು ಅಂತ ಹೇಳಿದ್ರು’: ಬಾಲಿವುಡ್ ನ ಕರಾಳ ಮುಖ ಬಿಚ್ಚಿಟ್ಟ ಪ್ರಿಯಾಂಕ ಚೋಪ್ರ!

masthmagaa.com:

ಬಾಲಿವುಡ್‌ನ ಹಲವು ವಿಷಯಗಳ ಬಗ್ಗೆ ಪ್ರಿಯಾಂಕ ಚೋಪ್ರಾ ಈಗ ಒಪನ್‌ ಆಗೇ ಹೇಳ್ತಾ ಇದಾರೆ. ಈ ಹಿಂದೆ ತನ್ನ ಬಣ್ಣದಿಂದ ಅನುಭವಿಸಿದ ಕಷ್ಟಗಳ ಬಗ್ಗೆ ಪ್ರಿಯಾಂಕ ಮಾತಾಡಿದ್ರು . ಈಗ ಬಾಲಿವುಡ್‌ನ ಮತ್ತೊಂದು ಅಸಲಿ ಮುಖವನ್ನ ಸಮಾಜದ ಎದುರು ತೆರೆದಿಟ್ಟಿದ್ದಾರೆ.

ದಿ ಜೋ ರಿಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕ ಮಾತನಾಡಿದ್ದಾರೆ.
“ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ಒಂದು ಸಿನಿಮಾವನ್ನೂ ಸಹ ಒಪ್ಪಿಕೊಂಡಿದ್ದೆ. ಅದರಲ್ಲಿ ನಾನು ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಒಳ ಉಡುಪಗಳನ್ನೆಲ್ಲ ಕಳಚಬೇಕು ಅಂತ ಹೇಳಿದ್ರು. ನನಗೆ ತುಂಬ ಸಿಟ್ಟು ಬಂತು, ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ. ಆದರೆ ಅದಕ್ಕೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ ಅನ್ನ ಬಿಟ್ಟೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಅಂತ ಹೇಳಿದ್ದೆ. ಶೂಟಿಂಗ್​ ಸೆಟ್​ನಲ್ಲಿ ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನು ಏನೂ ಬೈದಿರಲಿಲ್ಲ. ಅವನ ವಿರುದ್ಧ ಸಹ ಮಾತನಾಡಲಿಲ್ಲ. ಯಾಕಂದ್ರೆ ಆತನ ವಿರುದ್ಧ ಮಾತಾಡೋಕೆ ನನಗೆ ಭಯ ಆಗ್ತಾ ಇತ್ತು. ನಾನು ಅವತ್ತು ಏನೂ ಮಾತಾಡದೇ ಸುಮ್ಮನೆ ಆ ಸಿನಿ ನಿರ್ಮಾಪಕರ ಕಚೇರಿಯಿಂದ ಹೊರಗೆ ಬಂದುಬಿಟ್ಟೆ. ಆದರೆ ಈಗಲೂ ಅನ್ನಿಸುತ್ತದೆ, ನಾನು ಅವತ್ತು ಆ ವ್ಯಕ್ತಿಗೆ ಬೈಯ್ಯಬೇಕಿತ್ತು. ನೀವು ಹೇಳ್ತಾ ಇರೋದು ತಪ್ಪು ಅಂತ ಅವರಿಗೆ ಹೇಳಬೇಕಿತ್ತು. ಆ ಕ್ಷಣಕ್ಕೆ ಭಯಗೊಂಡು, ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತ್ತು. ಅದು ನಾನು ಮಾಡಿದ ದೊಡ್ಡ ತಪ್ಪು” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply