2ನೇ ಡೋಸ್​ ಹಾಕ್ಕೊಂಡ ಬಳಿಕ ಡಾ. ಹರ್ಷವರ್ಧನ್ ಹೇಳಿದ್ದೇನು..?

masthmagaa.com:

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ದಂಪತಿ ಇವತ್ತು ಕೊರೋನಾ ಲಸಿಕೆಯ ಎರಡನೇ ಡೋಸ್​ ಹಾಕಿಸಿಕೊಂಡಿದ್ದಾರೆ. ದೆಹಲಿಯ ಹಾರ್ಟ್ ಅಂಡ್ ಲಂಗ್ ಇನ್​ಸ್ಟಿಟ್ಯೂಟ್​​ನಲ್ಲಿ ಹರ್ಷವರ್ಧನ್ ಮತ್ತು ಅವರ ಪತ್ನಿ ನೂತನ್ ಗೋಯೆಲ್​ಗೆ ಲಸಿಕೆ ಹಾಕಲಾಯ್ತು. ಬಳಿಕ ಮಾತನಾಡಿದ ಡಾ. ಹರ್ಷವರ್ಧನ್, ಮೊದಲ ಡೋಸ್ ತಗೊಂಡ ನಂತರ ನಮ್ಮಿಬ್ಬರಿಗೆ ಯಾವುದೇ ರೀತಿಯ ಅಡ್ಡಪರಿಣಾಮ ಕಾಣಿಸಿಕೊಂಡಿಲ್ಲ. ಭಾರತದ ಎರಡು ಲಸಿಕೆ ಕೂಡ ಸೇಫ್ ಮತ್ತು ಎಫೆಕ್ಟಿವ್ ಆಗಿದೆ. ಸಾಕಷ್ಟು ಜನಕ್ಕೆ ಲಸಿಕೆ ಬಗ್ಗೆ ಈಗಲು ಅನುಮಾನವಿದೆ. ಹೀಗಾಗಿ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಹರಿದಾಡುತ್ತಿರುವ ವಿಚಾರಗಳನ್ನ ನಂಬಬೇಡಿ ಅಂತ ನಾನು ಕೇಳಿಕೊಳ್ಳುತ್ತೇನೆ. ಲಸಿಕೆ ಹಾಕ್ಕೊಂಡ ಬಳಿಕ ಕೊರೋನಾ ತಗುಲಿರೋ ಪ್ರಕರಣಗಳು ತುಂಬಾ ಕಮ್ಮಿ. ಹಾಗೇನಾದ್ರೂ ಆದ್ರೂ ಕೂಡ ನೀವು ಆಸ್ಪತ್ರೆ ಅಥವಾ ಐಸಿಯುಗೆ ದಾಖಲಾಗುವ ಸಾಧ್ಯತೆಯನ್ನ ಕೊರೋನಾ ಲಸಿಕೆ ಕಮ್ಮಿ ಮಾಡುತ್ತೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply