ಹಿಜಬ್ ಜೊತೆಯಲ್ಲೇ ಹುಟ್ಟಿಕೊಳ್ಳುತ್ತಾ ದುಪ್ಪಟ್ಟ ವಿವಾದ?

masthmagaa.com:

ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ದುಪ್ಪಟ್ಟ ಧರಿಸಲು ಅವಕಾಶ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಿಜಬ್ ವಿಚಾರ ಸುಪ್ರೀಂಕೋರ್ಟ್​ನಲ್ಲಿ ಇರೋದ್ರಿಂದ ಅದರ ಬಗ್ಗೆ ಪ್ರಸ್ತಾಪಿಸೋದಿಲ್ಲ. ಆದ್ರೆ ಕೆಲ ಮುಸ್ಲಿಂ ಧರ್ಮಗುರುಗಳು ನನ್ನನ್ನ ಭೇಟಿಯಾಗಿ ಈ ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯಲ್ಲಿ ಸಮವಸ್ತ್ರವನ್ನೇ ಧರಿಸ್ತಾರೆ. ಅದರ ಜೊತೆಗೆ ಅದೇ ಬಣ್ಣದ ದುಪ್ಪಟ್ಟವನ್ನ ಬಳಸಲು ಅವಕಾಶ ಕೊಡಿ ಅಂತ ಕೇಳಿದ್ದಾರೆ. ಅದು ಬುರ್ಖಾ ಅಥವಾ ಹಿಜಬ್​ ಅಲ್ಲ. ಈ ಬಗ್ಗೆ ಸರ್ಕಾರ ನಿರ್ಧಾರ ತಗೋಬೇಕು ಅಂತ ಸಿದ್ದರಾಮಯ್ಯ ಹೇಳಿದ್ಧಾರೆ. ಜೊತೆಗೆ ಸದನದಲ್ಲಿ ದುಪ್ಪಟ್ಟದ ಡೆಮೊ ಕೂಡ ತೋರಿಸಿದ್ರು.

-masthmagaa.com

Contact Us for Advertisement

Leave a Reply