ಆಸ್ಟ್ರೇಲಿಯಾ: ಹಿಂದೂ ದೇವಾಲಯದ ಮೇಲೆ ʻಹಿಂದೂಸ್ತಾನ್‌ ಮುರ್ದಾಬಾದ್‌ʼ ಘೋಷಣೆ ಬರೆದು ಅಟ್ಟಹಾಸ

masthmagaa.com:

ಇತ್ತೀಚೆಗೆ ವಿದೇಶಗಳಲ್ಲಿ ಹಿಂದೂ ದೇವಾಲಯಗಳನ್ನ ವಿರೂಪಗೊಳಿಸಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡೋದು ಹೆಚ್ಚಾಗ್ತಿದೆ. ಇದೀಗ ಆಸ್ಟ್ರೇಲಿಯಾದಲ್ಲಿ ಇಂಥದ್ದೇ ಘಟನೆ ವರದಿಯಾಗಿದ್ದು, ಅಲ್ಲಿನ ಸ್ವಾಮಿನಾರಾಯಣ ದೇವಾಲಯವನ್ನ ವಿರೂಪಗೊಳಿಸಲಾಗಿದೆ. ದೇವಾಲಯದ ಗೋಡೆಗಳ ಮೇಲೆ ʻಹಿಂದೂಸ್ತಾನ್‌ ಮುರ್ದಾಬಾದ್‌ʼ ಅಂತ ಬರೆಯಲಾಗಿದೆ. ಈ ಕೃತ್ಯವನ್ನ ಖಲಿಸ್ತಾನಿ ಪುಂಡರು ಮಾಡಿದ್ದು, ತಮ್ಮ ಕೃತ್ಯವನ್ನ ವಿಡಿಯೋದಲ್ಲಿ ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಇನ್ನು ಪವಿತ್ರ ಸ್ಥಳಗಳಲ್ಲಿ ಈ ರೀತಿ ದ್ವೇಷವನ್ನ ಹರಡೊ ರೀತಿ ಹಾಗೂ ಅದನ್ನ ನಾಶಗೊಳಿಸೋ ಕ್ರಮಗಳನ್ನ ಸ್ವೀಕರಿಸೋಕಾಗಲ್ಲ ಅಂತ ವಿಕ್ಟೋರಿಯಾದ ಹಿಂದೂ ಕೌನ್ಸಿಲ್‌ ಮಕ್ರಂದ್‌ ಭಾಗವತ್‌ ಘಟನೆಯನ್ನ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply