ಪಾಕಿಸ್ತಾನದ ಕರಾಚಿಯಲ್ಲಿ ದೇಗುಲ ಧ್ವಂಸ!

masthmagaa.com:

ಪಾಕಿಸ್ತಾನದಲ್ಲಿ ಮತ್ತೊಂದು ಹಿಂದೂ ಮಂದಿರದ ಮೇಲೆ ದಾಳಿ ನಡೆದಿದೆ. ಕರಾಚಿಯಲ್ಲಿ ಜೋಗ್ ಮಾಯಾ ಮಂದಿರದೊಳಗೆ ನುಗ್ಗಿದ ದುಷ್ಟನೊಬ್ಬ, ಸುತ್ತಿಗೆಯಿಂದ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಕೂಡಲೇ ಸ್ಥಳೀಯರು ಒಟ್ಟಾಗಿ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವ್ಯಕ್ತಿ ಮೇಲೆ ಧರ್ಮನಿಂದನೆ ಕೇಸ್ ದಾಖಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಹನುಮಾನ್ ದೇವಿ ಮಾತಾ ಮಂದಿರಕ್ಕೆ ನುಗ್ಗಿದ್ದ ಕಳ್ಳರು ವಿಗ್ರಹವನ್ನು ಅಪವಿತ್ರಗೊಳಿಸಿದ್ರು. ಜೊತೆಗೆ ದೇಗುಲದಲ್ಲಿದ್ದ ಆಭರಣ ಮತ್ತು ಸಾವಿರಾರು ರೂಪಾಯಿ ದುಡ್ಡು ಕದ್ಕೊಂಡು ಹೋಗಿದ್ರು. ಇತ್ತೀಚಿಗೆ ಇಂತಹ ಪ್ರಕರಣಗಳು ಜಾಸ್ತಿಯಾಗ್ತಿದ್ದು. ಅಲ್ಪಸಂಖ್ಯಾತರಿಗೆ ಸರಿಯಾಗಿ ರಕ್ಷಣೆ ನೀಡ್ತಿಲ್ಲ ಅಂತ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನಕ್ಕೆ ಉಗಿಯುತ್ತಲೇ ಇದೆ.

-masthmagaa.com

Contact Us for Advertisement

Leave a Reply