ಬೆಂಗಳೂರಿನ TCS ಕ್ಯಾಂಪಸ್‌ಗೆ ಬಾಂಬ್‌ ಬೆದರಿಕೆ: ಉದ್ಯೋಗಿಗಳು ಕಕ್ಕಾಬಿಕ್ಕಿ!

masthmagaa.com:

ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನ ಕ್ಯಾಂಪಸ್‌ಗೆ ಕರೆ ಮಾಡಿ ಬಾಂಬ್‌ ಬೆದರಿಕೆ ನೀಡಿರೋ ಘಟನೆ ಮಂಗಳವಾರ ಅಂದ್ರೆ ನೆನ್ನೆ ನಡೆದಿದೆ. ಇದ್ರಿಂದ ಆಫೀಸ್‌ನಲ್ಲಿರೋ ಎಲ್ರೂ ಬೆಚ್ಚಿಬಿದ್ದಿದ್ದು, ಅಲ್ಲಿನ ಉದ್ಯೋಗಿಗಳನ್ನ ಆಫೀಸ್‌ ಆವರಣದಿಂದ ಹೊರಗೆ ಕಳುಹಿಸಲಾಗಿದೆ. ಅಂದ್ಹಾಗೆ ಕ್ಯಾಂಪಸ್‌ನ ಬಿ ಬ್ಲಾಕ್‌ನಲ್ಲಿರೋ ಅಧಿಕಾರಿಗಳಿಗೆ ಕಂಪನಿಯ ಕ್ಯಾಂಪಸ್‌ಗೆ ಬಾಂಬ್‌ ಹಾಕಿರೋದಾಗಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ವಿಷಯ ತಿಳಿಯುತ್ತಾ ಇದ್ಹಾಗೆ, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಬಾಂಬ್‌ ಬೆದರಿಕೆ ಹಾಕಿರೋದಾಗಿ ಕರೆ ಬಂದ ಮೊಬೈಲ್‌ ನಂಬರ್‌ನ್ನ ಟ್ರೇಸ್‌ ಮಾಡಿದ್ದಾರೆ. ಈ ವೇಳೆ ಹುಬ್ಬಳ್ಳಿ ಜಿಲ್ಲೆಯಿಂದ ಒಬ್ಬ ಮಹಿಳೆ ಕಾಲ್‌ ಮಾಡಿ ಈ ರೀತಿ ಬೆದರಿಕೆ ನೀಡಿದ್ದಾಳೆ ಅಂತ ತಿಳಿದುಬಂದಿದೆ. ಅಂದ್ಹಾಗೆ ಈಕೆಯನ್ನ ಇತ್ತೇಚೆಗಷ್ಟೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ಕಂಪನಿಯಿಂದ ತೆಗೆದುಹಾಕಲಾಗಿತ್ತು. ಇನ್ನು ಪೊಲೀಸರ ಪ್ರಾರಂಭಿಕ ತನಿಖೆಯ ಪ್ರಕಾರ, ತನ್ನನ್ನು ಕೆಲಸದಿಂದ ವಜಾಗೊಳಿಸಿರೋ ಕಾರಣದಿಂದ ಪ್ರತೀಕಾರಕ್ಕಾಗಿ, ಸಿಟ್ಟಿನಿಂದ ಈ ರೀತಿ ಕಾಲ್‌ ಮಾಡಿ ಬಾಂಬ್‌ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಸದ್ಯ ಪೊಲೀಸರು ಈ ಮಹಿಳೆಯ ಹುಡುಕಾಟದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply