ಸಂಬಳ ಕೊಡುವಂತೆ ತಾಲಿಬಾನಿಗಳಿಗೆ ಶಿಕ್ಷಕರ ಆಗ್ರಹ!

masthmagaa.com:

ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಹಂಗ್ ಸರ್ಕಾರ ನಡೆಸ್ತೀವಿ.. ಹಿಂಗ್ ಸರ್ಕಾರ ನಡೆಸ್ತೀವಿ ಅಂತ ಬಿಲ್ಡಪ್ ಕೊಟ್ಟಿದ್ರು. ಆದ್ರೆ ಇಲ್ಲಿನ ಶಿಕ್ಷಕರ ಸ್ಥಿತಿ ಚಿಂತಾಜನಕವಾಗಿದೆ. ಬರೀ ತಾಲಿಬಾನಿಗಳು ಮಾತ್ರವಲ್ಲ.. ಅದಕ್ಕಿಂತ ಹಿಂದಿದ್ದ ಸರ್ಕಾರದಲ್ಲೂ ಅವರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಇದೀಗ ಅಫ್ಘಾನಿಸ್ತಾನದ ಪೂರ್ವ ಭಾಗದ ಹೇರತ್ ಪ್ರಾಂತ್ಯದಲ್ಲಿ ನೂರಾರು ಶಿಕ್ಷಕರು ಒಟ್ಟುಗೂಡಿದ್ದು, ತಮ್ಮ ಬಾಕಿ ಸ್ಯಾಲರಿ ಪಾವತಿಸಬೇಕು ಅಂತ ಆಗ್ರಹಿಸಿದ್ದಾರೆ. ನಮಗೆ ಆರ್ಥಿಕ ಸಮಸ್ಯೆ ಇದೆ. ಉಳಿತಾಯ ಬಿಡಿ, ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸಲು ದುಡ್ಡಿಲ್ಲ. ನಮ್ಮ ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ಅಗತ್ಯತೆ ಪೂರೈಸೋಕೂ ಸಾಧ್ಯವಾಗ್ತಿಲ್ಲ. ಕರೆಂಟ್ ಬಿಲ್ ಕಟ್ಟೋಕೆ ಆಗದೇ ಮನೆಯಲ್ಲಿ ಕನೆಕ್ಷನ್ ಕಟ್ ಆಗಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಒಬ್ಬರು ಶಿಕ್ಷಕರಂತೂ ನನ್ನ ಮಗು ಒಂದು ತಿಂಗಳಿಂದ ಅನಾರೋಗ್ಯಕ್ಕೀಡಾಗಿದೆ. ಆದ್ರೆ ಆಸ್ಪತ್ರೆಗೆ ಕರ್ಕೊಂಡು ಹೋಗಕ್ಕೆ ನನ್ನ ಬಳಿ ದುಡ್ಡಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಅಫ್ಘಾನಿಸ್ತಾನದಲ್ಲಿ 10 ಸಾವಿರ ಮಹಿಳಾ ಶಿಕ್ಷಕರು ಸೇರಿದಂತೆ 18 ಸಾವಿರ ಶಿಕ್ಷಕರಿಗೆ ಕಳೆದ 4 ತಿಂಗಳಿಂದ ಸಂಬಳ ಆಗಿಲ್ಲ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply