‘ನಾನು ತಂದೆ ಆಗ್ಬೇಕು ಆದ್ರೆ ಈ ನೆಲದ ಕಾನೂನು ಅವಕಾಶ ಕೊಡ್ತಾ ಇಲ್ಲ’: ಸಲ್ಮಾನ್‌ ಖಾನ್‌

masthmagaa.com:

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೊನ್ನೆ ಈದ್ ಗೆ ರಿಲೀಸ್ ಆಗಿತ್ತು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಪ್ರೇಕ್ಷಕರಿಗೆ ಅಷ್ಟಕಷ್ಟೇ ಅನಿಸಿತ್ತು. ಬಾಕ್ಸ್ ಆಫೀಸ್ ಅಲ್ಲೂ expect ಮಾಡಿದಷ್ಟು ಸದ್ದು ಮಾಡಲಿಲ್ಲ.

ಸಧ್ಯಕ್ಕೆ ಸೋಲಿನ ಸುಳಿಯಲ್ಲಿ ಸಿಲುಕಿರುವ ಸಲ್ಲು ಭಾಯ್ ಗೆ ಫ್ಯಾನ್ ಬೇಸ್ ಅಂತೂ ಕಡಿಮೆ ಆಗಿಲ್ಲ ಬಿಡಿ ಅದು ಬೇರೆ ವಿಷಯ.

ಇನ್ನು ಮೈನ್ ಮ್ಯಾಟರ್ ಗೆ ಬರೋಣ, ಸಲ್ಲು ಭಾಯ್ ತಮ್ಮ ಸಿನಿ ಕ್ಯಾರಿಯರ್ ಶುರು ಮಾಡಿದಾಗ್ಲಿಂದ ಒಂದಲ್ಲ ಒಂದು ಹೀರೋಯಿನ್ ಜೊತೆಗೆ ಅವರ ಹೆಸರು ತಳುಕು ಹಾಕಿಕೊಂಡೇ ಬಂದಿದೆ. ಆದ್ರೂ ಅದ್ಯಾಕೋ ಕಂಕಣ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಐಶ್ವರ್ಯ ರೈ ಇಂದ ಹಿಡಿದು ಕತ್ರಿನಾ ಕೈಫ್ ತನಕ ಇದ್ದ ಅಫೇರ್ ಗಳೆಲ್ಲ ಬ್ರೇಕಪ್ ಅಲ್ಲೇ ಕೊನೆ ಆದ್ವು. ಸಲ್ಲು ಭಾಯ್ ಗೆ ಬರೋಬ್ಬರಿ 57 ವರ್ಷ.

60 ರ ಆಸುಪಾಸಿನಲ್ಲಿರುವ ಸಲ್ಮಾನ್ ಖಾನ್ ಈಗ ಈ ವಯಸ್ಸಿನಲ್ಲಿ ತಂದೆ ಆಗುವ ಆಸೆ ಇದೆ ಆದ್ರೆ ಅದಕ್ಕೆ ಭಾರತೀಯ ಕಾನೂನು ಅವಕಾಶ ಕೊಡ್ತಾ ಇಲ್ಲ ಎನ್ನುವಂಥ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ.

ಸಲ್ಮಾನ್‌ ಖಾನ್‌ಗೆ ಮಕ್ಕಳ ಮೇಲೆ ತುಂಬಾ ಪ್ರೀತಿ ಇದೆ. ಹಲವಾರು ಫೋಟೋಗಳು ಮತ್ತು ವಿಡಿಯೋಗಳಲ್ಲಿ, ತಮ್ಮ ಸೊಸೆಯಂದಿರು ಮತ್ತು ಸೋದರಳಿಯರೊಂದಿಗೆ ಸಮಯ ಕಳೆಯುವುದನ್ನು ನೋಡಬಹುದು. ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ಗೆ ಇಬ್ಬರು ಮಕ್ಕಳಿದ್ದಾರೆ–ಆಯತ್ ಶರ್ಮಾ ಮತ್ತು ಅಹಿಲ್ ಶರ್ಮಾ. ಸಲ್ಮಾನ್‌ನ ಇನ್ನೊಬ್ಬ ಸಹೋದರಿ ಅಲ್ವಿರಾ ಖಾನ್‌ಗೂ ಕೂಡ ಇಬ್ಬರು ಮಕ್ಕಳಿದ್ದಾರೆ–ಅಲಿಜೆ ಅಗ್ನಿಹೋತ್ರಿ ಮತ್ತು ಅಯಾನ್ ಅಗ್ನಿಹೋತ್ರಿ. ಅವರ ಸಹೋದರರಾದ ಸೊಹೈಲ್ ಮತ್ತು ಅರ್ಬಾಜ್ ಅವರಿಗೂ ಮಕ್ಕಳಿದ್ದಾರೆ. ಇವರೆಲ್ಲರ ಮಕ್ಕಳ ಜೊತೆ ಒಳ್ಳೆ ಟೈಮ್‌ ಸ್ಪೆಂಡ್‌ ಮಾಡ್ತಾರೆ.

ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್‌ ಮಗುವಿನ ನಿರೀಕ್ಷೆ ಮಾಡಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ. ನನಗೆ ಒಂದು ಮಗು ಬೇಕು ಅಂತ ಪ್ಲಾನ್‌ ಮಾಡಿದ್ದೆ. ಆದರೆ ನಮ್ಮ ಇಂಡಿಯಾದ ಕಾನೂನಿನಲ್ಲಿ ಅದಕ್ಕೆ ಒಪ್ಪಿಗೆ ಇಲ್ಲ. ನಾನೇನಾದ್ರೂ ಮತ್ತೆ ಮುಂದುವರೆದರೆ ಅದು ಇಲ್ಲೀಗಲ್‌ ಅಂತ ಆಗತ್ತೆ.ಅದಕ್ಕೆ ಏನ್‌ ಮಡ್ಬೋದು ಅಂತ ಯೋಚನೆ ಮಾಡ್ತಾ ಇದೀನಿ. ಪ್ರಯತ್ನ ಮಾಡ್ತಾ ಇದೀನಿ, ಕಾನೂನು ಏನಾದ್ರೂ ಚೇಂಜ್‌ ಆದರೆ ಈ ಪ್ಲಾನ್‌ ವರ್ಕೌಟ್‌ ಆಗತ್ತೆ . ಆದರೆ ಒಂದು ಮಗುಗೆ ತಾಯಿ ತುಂಬಾನೇ ಮುಖ್ಯ ಆಗ್ತಾಳೆ. ನಾನ್‌ ಏನದ್ರೂ ನಮ್ಮನೆಗೆ ಮಗು ಕರ್ಕೊಂಡು ಬಂದ್ರೆ ನೋಡ್ಕೋಳೊದಕ್ಕೆ ಸುಮಾರು ತಾಯಂದಿರು ಇದಾರೆ. ಇಡೀ ಜಿಲ್ಲೆ, ಇಡಿ ಗ್ರಾಮದವರೂ ಬೇಕಾದ್ರೂ ಬರ್ತಾರೆ. ಆದರೆ ನನ್ನ ಮಗುಗೆ ತಾಯಿ ಆಗಬೇಕಾದವಳು ನನ್ನ ಹೆಂಡ್ತಿ. ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply