“ಪಾಕಿಸ್ತಾನಕ್ಕೆ ಹೋಗೋದಕ್ಕೆ ನನಗೆ ಪರ್ಮಿಷನ್‌ ಕೊಟ್ಟಿರಲಿಲ್ಲ”: ರಾಜಮೌಳಿ!

masthmagaa.com:

ಎಸ್‌ಎಸ್‌ ರಾಜಮೌಳಿ ಸದ್ಯ ಬಹು ಬೇಡಿಕೆಯ ಡೈರೆಕ್ಟರ್‌. ಪ್ರಪಂಚದಾದ್ಯಂತ ಸುದ್ದಿ ಮಾಡಿ ಆಸ್ಕರ್‌ ಅವಾರ್ಡ್‌ ಗೆದ್ದಿರುವ ಆರ್‌ಆರ್‌ಆರ್‌ ಚಿತ್ರಕ್ಕೂ ಮೊದಲು 2009ರಲ್ಲಿ ಮಗಧೀರ ಎನ್ನುವಂತ ಅದ್ಭುತ ಚಿತ್ರವನ್ನ ಪ್ರೇಕ್ಷಕರಿಗೆ ಕೊಟ್ಟಿದ್ರು. ಈ ಚಿತ್ರದ ಕತೆ 400 ವರ್ಷಗಳ ಹಿಂದೆ ನಡೆದಿರುವ ಒಂದು ಪ್ರೇಮ ಕತೆಯನ್ನ ಆಧರಿಸಿತ್ತು. ಇಂತಿಪ್ಪ ರಾಜಮೌಳಿಗೆ ಪಾಕಿಸ್ತಾನ ಪ್ರವೇಶಿಸೋದಕ್ಕೆ ಪರ್ಮಿಷನ್‌ ಕೊಟ್ಟಿರ್ಲಿಲ್ಲ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದನ್ನ ಸ್ವತಃ ರಾಜಮೌಳಿ ಅವರೇ ಬಹಿರಂಗವಾಗು ಟ್ವೀಟ್‌ ಮಾಡಿ ಹೇಳಿಕೊಂಡಿದ್ದಾರೆ.

ನಿನ್ನೆ ಮಹೀಂದ್ರಾ ಗ್ರೂಪ್‌ನ ಚೇರ್‌ಮೆನ್‌ ಆನಂದ್‌ ಮಹೀಂದ್ರ, ರಾಜಮೌಳಿಯವರಿಗೆ ಟ್ಯಾಗ್‌ ಮಾಡಿ ಟ್ವೀಟ್‌ವೊಂದನ್ನ ಮಾಡಿದ್ರು. “ನೀವು ಇತಿಹಾಸಕ್ಕೆ ಸಂಬಂಧ ಪಟ್ಟ ಸಿನಿಮಾಗಳನ್ನ ತುಂಬಾ ಅದ್ಭುತವಾಗಿ ತೋರಿಸುತ್ತೀರಿ. ಪುರಾತನ ನಾಗರೀಕತೆಯ ಬಗ್ಗೆ ಜಾಗೃತಿ ಮೂಡಿಸುವಂತ ಕೆಲಸಗಳನ್ನ ನೀವು ಸಿನಿಮಾದ ಮೂಲಕ ಮಾಡ್ತಾ ಇದೀರಿ. ಎಷ್ಟೋ ಜನಕ್ಕೆ ಮೊಹೆಂಜೋದಾರೋದಲ್ಲಿರುವ ಸಿಂಧ್‌ ಪ್ರಾಂತ್ಯದ ಬಗ್ಗೆ ಇಲ್ಲಿ ತನಕ ಗೊತ್ತಿಲ್ಲ. ಇದರ ಮೇಲೆ ಬೆಳಕು ಚೆಲ್ಲುವಂತ ಸಿನಿಮಾನ ನೀವು ಯಾಕೆ ಮಾಡಬಾರದು” ಅಂತ ಪ್ರಶ್ನೆ ಕೇಳಿದ್ರು.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ರಾಜಮೌಳಿ “ಹೌದು ಸರ್‌, ದೋಲವೀರದಲ್ಲಿ ಮಗಧೀರ ಚಿತ್ರೀಕರಣದ ಸಮಯದಲ್ಲಿ ಅಲ್ಲೊಂದು ಮರವನ್ನ ನೋಡಿದ್ದೆ. ಅದನ್ನ ನೋಡಿ ನನಗೆ ಸಿಂಧೂ ನಾಗರೀಕತೆಯ ಬಗ್ಗೆ ಒಂದಿಷ್ಟು ಐಡಿಯಾಗಳು ಬಂದಿತ್ತು. ಅದಾದ 2 ವರ್ಷದ ನಂತ್ರ ಮತ್ತೆ ಪಾಕಿಸ್ತಾನಕ್ಕೆ ಹೋದಾಗ ಮೊಹೆಂಜೋದಾರೋಗೆ ಹೋಗಬೇಕು ಅಂತ ತುಂಬಾನೆ ಟ್ರೈ ಮಾಡಿದ್ದೆ. ಆದರೆ ನನಗೆ ಪರ್ಮಿಷನ್‌ ಸಿಕ್ಕಿರಲಿಲ್ಲ”. ಅಂತ ರಿ-ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply