ನನ್ನ ಯಾವುದಾದ್ರೂ CD ಇದ್ರೆ ರಾಷ್ಟ್ರ ಮಟ್ಟದಲ್ಲಿ ಬಿಡುಗಡೆ ಮಾಡಲಿ

masthmagaa.com:

ನಾನ್​ ಯಾವುದೇ ಕೋರ್ಟ್​ಗೆ ಹೋಗಲ್ಲ ಅಂತ ಶಾಸಕ ಮುನಿರತ್ನ ಹೇಳಿದ್ದಾರೆ. ಒಂದ್ವೇಳೆ ನನ್ನ ಸಿಡಿ ಏನಾದ್ರೂ ಇದ್ರೆ ಅದನ್ನ ದಯವಿಟ್ಟು ಬಿಡುಗಡೆ ಮಾಡಿ ಅಂತ ನಾನೇ ಹೇಳ್ತೀನಿ. ರಾಜ್ಯ ಮಟ್ಟದಲ್ಲಿ ಅಲ್ಲ ರಾಷ್ಟ್ರ ಮಟ್ಟದಲ್ಲಿ ಬಿಡುಗಡೆ ಮಾಡಲಿ. ಮಾಧ್ಯಮದವರನ್ನ ಕರೆಸಿ ಅದನ್ನ ಬಿಡುಗಡೆ ಮಾಡುವಂತೆ ಹೇಳ್ತೀನಿ. ಅದನ್ನ ಬಿಟ್ಟು ಮಾನಹಾನಿ ಆಗುತ್ತೆ, ಅದಾಗುತ್ತೆ, ಇದಾಗುತ್ತೆ, ನನಗೆ ರಕ್ಷಣೆ ಕೊಡಿ ಅಂತೆಲ್ಲಾ ಯಾವ ಕೋರ್ಟ್​ಗೂ ಹೋಗಲ್ಲ ಅಂತ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಒಬ್ಬರದ್ದು ತಪ್ಪು ಅನಿಸುತ್ತಿಲ್ಲ. ಇಬ್ಬರೂ ಪರಸ್ಪರ ಒಪ್ಪಿಕೊಂಡಂತೆ ಕಾಣ್ತಿದೆ. ರಾಜಕೀಯದಲ್ಲಿ ಪಿತೂರಿ ನಡೆಸೋದು ಮಾಮೂಲಿ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂತ ಮುನಿರತ್ನ ಹೇಳಿದ್ದಾರೆ.

ಇನ್ನು ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿ, ‘ಸಿನಿಮಾಗಳಲ್ಲಿ ಸಾಹಸ ದೃಶ್ಯ ಮಾಡೋವಾಗ ಕೈ, ಕಾಲು ಕತ್ತರಿಸಿ, ತಲೆಯನ್ನ ಕತ್ತರಿಸಿ ಗ್ರಾಫಿಕ್ಸ್ ಮಾಡಲಾಗುತ್ತೆ. ಇದು ಗ್ರಾಫಿಕ್ಸ್ ಯುಗ.. ಆಧುನಿಕ ಯುಗದ ಗ್ರಾಫಿಕ್ಸ್​ಗೆ ಬಲಿಪಶುಗಳಾಗುವ ಭಯದಲ್ಲಿ ಸಚಿವರು ಕೋರ್ಟ್​ನಿಂದ ತಡೆ ತಂದಿರಬಹುದು’ ಎಂದಿದ್ದಾರೆ. ಇಲ್ಲಿ ಒಂದಂತೂ ಸ್ಪಷ್ಟ, ಆಡಳಿತ ಪಕ್ಷದ ಶಾಸಕ-ಸಚಿವರಲ್ಲೇ ಭಿನ್ನಾಭಿಪ್ರಾಯವಿದೆ. ಒಂದಷ್ಟು ಜನ ಇಬ್ಬರು ಪರಸ್ಪರ ಒಪ್ಪಿಕೊಂಡು ಇದನ್ನ ಮಾಡಿದ್ದಾರೆ ಅಂತ ಹೇಳ್ತಿದ್ರೆ.. ಇನ್ನೊಂದಷ್ಟು ಜನ ಈ ವಿಡಿಯೋವನ್ನ ಎಡಿಟ್ ಮಾಡಲಾಗಿದೆ, ಇದೆಲ್ಲಾ ಗ್ರಾಫಿಕ್ಸ್ ಅಂತ ಹೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply