ಐಪಿಎಲ್​ ಮತ್ತು ಟಿ-20 ವಿಶ್ವಕಪ್ ಭವಿಷ್ಯ ನಾಳೆ ನಿರ್ಧಾರ..!

masthmagaa.com:

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ 2022ಕ್ಕೆ ಮುಂದೂಡಿಕೆಯಾಗಬಹುದು ಅಂತ ಐಸಿಸಿ ಮೂಲಗಳು ಹೇಳಿವೆ. ಆದ್ರೆ ಇದುವರೆಗೆ ಅಧಿಕೃತ ಘೋಷಣೆ ಆಗಿಲ್ಲ. ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ಬೋರ್ಡ್​ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಐಪಿಎಲ್ ಟೂರ್ನಿ ಬಗ್ಗೆಯೂ ಸ್ಪಷ್ಟತೆ ಸಿಗಬಹುದು.

ಅಂದ್ಹಾಗೆ ವರ್ಷಾಂತ್ಯದಲ್ಲಿ ಅಂದ್ರೆ ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಆದ್ರೆ ಜಗತ್ತಿನಾದ್ಯಂತ ಕೊರೋನಾ ಹಾವಳಿ ಇರೋದ್ರಿಂದ ಅಂತಾರಾಷ್ಟ್ರೀಯ ಟೂರ್ನಿ ನಡೆಯೋದು ಅನುಮಾನ ಎನ್ನಲಾಗಿದೆ. ಅಲ್ಲದೆ 2021ರ ಟಿ-20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಐಪಿಎಲ್​ ನಡೆಸೋ ಪ್ಲಾನ್​ ಬಿಸಿಸಿಐನದ್ದು. ಒಂದ್ವೇಳೆ ಈ ಬಾರಿಯ ಟಿ-20 ವಿಶ್ವಕಪ್ ಮುಂದೂಡಿಕೆಯಾದ್ರೆ, ಐಪಿಎಲ್​ ನಡೆಯುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply