ಐಸಿಸಿ ಟೆಸ್ಟ್​ ರ್ಯಾಂಕಿಂಗ್​​​​​ನಲ್ಲಿ ನಂಬರ್ ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್​!

masthmagaa.com:

ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್​ ಐಸಿಸಿ ಟೆಸ್ಟ್​​​ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷದ ಬಾಕ್ಸಿಂಗ್ ಡೇ ಟೆಸ್ಟ್ ಬಳಿಕ ಇದೇ ಮೊದಲ ಬಾರಿಗೆ ಈ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್ ಕ್ಯಾಪ್ಟನ್​​ ಕೇನ್ ವಿಲಿಯಮ್ಸನ್​​ರನ್ನು​​ 2 ಸ್ಥಾನಕ್ಕೆ ತಳ್ಳಿದ್ದಾರೆ. ಐಸಿಸಿ ವರ್ಲ್ಡ್​​​ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 13 ರನ್ ಗಳಿಸಿದ್ದ ವಿಲಿಯಮ್ಸನ್​​, ಗಾಯದಿಂದಾಗಿ 2ನೇ ಪಂದ್ಯ ಆಡಲಿಲ್ಲ. ಇದ್ರಿಂದ ಅವರ 5 ಅಂಕ ಕುಸಿದಿದ್ದು, 891 ಅಂಕ ಹೊಂದಿರೋ ಸ್ಮಿತ್ ಮೊದಲ ಸ್ಥಾನಕ್ಕೆ ಬಂದಿದ್ದಾರೆ. ನಾವ್ ಆಗ್ಲೇ ಬಾಕ್ಸಿಂಗ್ ಡೇ ಟೆಸ್ಟ್ ಅಂತ ಹೇಳಿದ್ವಿ. ಬಾಕ್ಸಿಂಗ್ ಡೇ ಕ್ರಿಸ್​ಮಸ್​​ನ ಮರುದಿನ.. ಆರಂಭದಲ್ಲಿ ಈ ದಿನ ಬಡವರಿಗೆ ಉಡುಗೊರೆಗಳನ್ನು ನೀಡಲಾಗ್ತಿತ್ತು. ಆದ್ರೀಗ ಬರೀ ಶಾಪಿಂಗ್​​​ಗೆ ಈ ದಿನ ಬಳಕೆಯಾಗುತ್ತೆ. ಈ ಟೆಸ್ಟ್ ಇದೇ ದಿನ ಶುರುವಾಗೋದ್ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಅಂತ ಕರೆಯಲಾಗುತ್ತೆ.

-masthmagaa.com

Contact Us for Advertisement

Leave a Reply