ಇಸ್ರೇಲ್​​-ಗಾಜಾ ಹೊಸ ಕಿರಿಕ್​​ಗೆ ವಿಶ್ವಸಂಸ್ಥೆ ಹೇಳಿದ್ದೇನು?

masthmagaa.com:

ಇಸ್ರೇಲ್​​ನಲ್ಲಿ ಹೊಸ ಪ್ರಧಾನಿ ಬರ್ತಿದ್ದಂತೆ ಗಾಜಾ ಜೊತೆಗಿನ ಸಂಘರ್ಷ ಮತ್ತೆ ಭುಗಿಲೆದ್ದಿರೋದಕ್ಕೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್​​, ಇಸ್ರೇಲ್ ಮತ್ತು ಹಮಾಸ್ ಇಬ್ಬರೂ​ ಕದನ ವಿರಾಮಕ್ಕೆ ಗೌರವಿಸಬೇಕು ಅಂತ ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗೆ ಜೆರುಸಲೆಂನಲ್ಲಿ ನಡೆದ ಯಹೂದಿಗಳ ಮೆರವಣಿಗೆ ಬಳಿಕ, ನಿನ್ನೆಯಷ್ಟೇ ಗಾಜಾ ಕಡೆಯಿಂದ ಸ್ಫೋಟಕ ಹೊತ್ತ ಬಲೂನ್ ಹಾರಿಸಿತ್ತು. ಇದ್ರ ಬೆನ್ನಲ್ಲೇ ಇಸ್ರೇಲ್ ಕೂಡ ರಾಕೆಟ್ ದಾಳಿ ನಡೆಸಿತ್ತು. ಇನ್ನು ಮೆರವಣಿಗೆಯಲ್ಲಿ ಯಹೂದಿಗಳು ಅರಬ್ ಮುರ್ದಾಬಾದ್ ಅಂತ ಘೋಷಣೆ ಕೂಗಿದ್ದರು. ಇದಕ್ಕೆ ಜಾತ್ಯಾತೀತ ನಾಯಕ ಮತ್ತು ಸದ್ಯ ಮೈತ್ರಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿರೋ ಯಾರ್ ಲ್ಯಾಪಿಡ್​​​​​​​ ವಿರೋಧ ವ್ಯಕ್ತಪಡಿಸಿದ್ಧಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಅವರು, ಈ ರೀತಿಯ ವರ್ತನೆ ಇಸ್ರೇಲಿಗರಿಗೆ ಒಳ್ಳೆಯದಲ್ಲ. ನಿಜವಾದ ಯಹೂದಿಗಳು ಹೀಗೆ ಮಾಡಲ್ಲ. ನಮ್ಮ ರಾಷ್ಟ್ರಧ್ವಜ ಕೂಡ ಇದಕ್ಕೆಲ್ಲಾ ಅನುಮತಿ ನೀಡಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply