2024ರ ಬೇಸಿಗೆಯಲ್ಲಿ ಭಾರತ ಇನ್ನಷ್ಟು ಗರಂ! ಕರ್ನಾಟಕಕ್ಕೂ ಬಿಸಿ ಚಾಟಿ!

masthmagaa.com:

ಈ ಬಾರಿಯ ಬೇಸಿಗೆ ಕಾಲ ಇನ್ನಷ್ಟು ಗರಂ ಆಗಲಿದೆ ಅಂತ ಇದೀಗ ಭಾರತೀಯ ಹವಾಮಾನ ಇಲಾಖೆ (IMD) ಫೆಬ್ರುವರಿ 29 ರಂದು ಮಾಹಿತಿ ನೀಡಿದೆ. ಎಲ್‌ ನಿನೊ ಅನ್ನೋ ಕಂಡೀಷನ್‌ನಿಂದ ಈ ಸಲದ ಬೇಸಿಗೆಗಾಲದಲ್ಲಿ ಉಷ್ಣಾಂಶ ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಬೇಸಿಗೆ ಕಾಲದ ಪ್ರಾರಂಭದಲ್ಲೇ ಈ ಎಲ್‌ ನಿನೊ ಕಂಡೀಷನ್‌ನ ನಾವು ಎಕ್ಸ್‌ಪೀರಿಯನ್ಸ್‌ ಮಾಡ್ಬೋದು ಅಂತ IMD ಹೇಳಿದೆ. ಸಾಮಾನ್ಯಕ್ಕಿಂತ ಹೆಚ್ಚು ಹೀಟ್‌ವೇವ್ಸ್‌ ಭಾರತದ ತೆಲಂಗಾಣ, ಆಂಧ್ರ ಮತ್ತು ಕರ್ನಾಟಕದ ಉತ್ತರ ಭಾಗದಲ್ಲಿ ಹಾಗೂ ಮಹಾರಾಷ್ಟ್ರ ಮತ್ತು ಒಡಿಶಾದ ಹಲವಾರು ಭಾಗಗಳಲ್ಲಿ ಇರಲಿದೆ ಅಂತ ಮುನ್ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply