ರಾಹುಲ್‌ ಗಾಂಧಿ ಕೇಸ್‌ ಬೆಳವಣಿಗೆಯನ್ನ ನಾವು ಗಮನಿಸುತ್ತಿದ್ದೇವೆ: ಅಮೆರಿಕ!

masthmagaa.com:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ್ರ ಸಂಸತ್‌ ಸದಸ್ಯ ಸ್ಥಾನ ಅನರ್ಹತೆ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ, ಕಾನೂನಿಗೆ ಗೌರವ ಮತ್ತ ನ್ಯಾಯಾಂಗ ಸ್ವಾತಂತ್ರ್ಯ ಯಾವುದೇ ಪ್ರಜಾಪ್ರಭುತ್ವದ ಮೂಲ ಆಧಾರಸ್ಥಂಭ ಅಂತ ಹೇಳಿದೆ. ಭಾರತೀಯ ಕೋರ್ಟ್‌ಗಳಲ್ಲಿ ರಾಹುಲ್‌ ಕೇಸ್‌ ಕುರಿತ ಬೆಳವಣಿಗೆಯನ್ನ ನಾವು ಗಮನಿಸುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಇರುವ ನಮ್ಮ ಬದ್ಧತೆ ಕುರಿತು ಭಾರತದ ಜೊತೆ ಮಾತನಾಡ್ತೀವಿ. ಡೆಮಾಕ್ರಸಿಯ ತತ್ವಗಳು, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನ ಒತ್ತಿ ಹೇಳ್ತೀವಿ. ಇವು ನಮ್ಮ ಪ್ರಜಾಪ್ರಭುತ್ವವನ್ನ ಸ್ಟ್ರಾಂಗ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿವೆ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಉಪವಕ್ತಾರ ವೇದಾಂತ್‌ ಪಟೇಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply