ಪಾಕಿಸ್ತಾನವನ್ನ ಚೇಂಜ್‌ ಮಾಡಲು ನನ್ನಿಂದ ಆಗಿಲ್ಲ: ಇಮ್ರಾನ್‌ ಖಾನ್

masthmagaa.com:

ಪಾಕಿಸ್ತಾನದಲ್ಲಿ ಬದಲಾವಣೆ ತರಲು ತಾನು ವಿಫಲವಾಗಿದ್ದೀನಿ ಅಂತ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಒಪ್ಪಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವಾಗ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ತಕ್ಷಣ​ ಬದಲಾವಣೆ ತರಬೇಕು ಅಂತ ಅಂದುಕೊಂಡಿದ್ವಿ. ಆದ್ರೆ ಶಾಕ್​ಗಳನ್ನ ಅಬ್ಸಾರ್ಬ್​ ಮಾಡಿಕೊಳ್ಳಲು ನಮ್ಮ ವ್ಯವಸ್ಥೆ ಅಸಮರ್ಥವಾಗಿದೆ ಅನ್ನೋದು ಆಮೇಲೆ ಅರಿವಾಯ್ತು ಅಂತ ಇಮ್ರಾನ್​ ಖಾನ್ ಹೇಳಿದ್ದಾರೆ. ಜೊತೆಗೆ ಸರ್ಕಾರ ಮತ್ತು ದೇಶದ ಹಿತಾಸಕ್ತಿ ಮಧ್ಯೆ ಯಾವುದೇ ಸಂಬಂಧ ಇಲ್ಲದಿರೋದೇ ದೊಡ್ಡ ಸಮಸ್ಯೆಯಾಗಿದೆ.

ಸರ್ಕಾರ ಮತ್ತು ಸಚಿವಾಲಯಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಅಂತಾನೂ ಇಮ್ರಾನ್​ ಖಾನ್​ ಹೇಳಿದ್ದಾರೆ. ಹೀಗೆ ಸರ್ಕಾರ ಮತ್ತು ಸಚಿವಾಲಯ ಸರಿಯಾಗಿ ಕೆಲಸ ಮಾಡಿಲ್ಲ ಅಂತ ಹೇಳಿದ್ದು ಯಾವ ಕಾರ್ಯಕ್ರಮದಲ್ಲಿ ಗೊತ್ತಾ, ಟಾಪ್​ ಟೆನ್​ ಸಚಿವಾಲಯಗಳಿಗೆ ಪ್ರಶಸ್ತಿಗಳನ್ನ ನೀಡುವ ಕಾರ್ಯಕ್ರಮದಲ್ಲಿ.. ಒಂದ್ಕಡೆ ಟೀಕೆ ನಾಡೋದು, ಮತ್ತೊಂದ್ಕಡೆ ಅವಾರ್ಡ್ ಕೊಡೋದು​..

ಇನ್ನು ಇಮ್ರಾನ್​ ಖಾನ್​ ಇತ್ತೀಚೆಗೆ ಚೀನಾಗೆ ಹೋಗಿ ಬೀಜಿಂಗ್​ ವಿಂಟರ್ ಒಲಿಂಪಿಕ್ಸ್​ನ ಓಪನಿಂಗ್ ಸೆರಮನಿಯಲ್ಲಿ ಭಾಗವಹಿಸಿದ್ರು. ಈ ವೇಳೆ ಕುಚಿಕು ದೋಸ್ತ್​​ ಜಿನ್​ಪಿಂಗ್ ಭೇಟಿಯಾಗಿ, ಸಾಲಕ್ಕೆ ಬೇಡಿಕೆ ಇಟ್ಟಿದ್ರು ಇಮ್ರಾನ್​ ಖಾನ್​. ಆದ್ರೆ ಇಮ್ರಾನ್​​ರ ಚೀನಾ ಭೇಟಿ ಬರೀ ಸಾಲ ಕೇಳೋದು ಮಾತ್ರವಾಗಿರಲಿಲ್ಲ, ಕ್ಷೀಣಿಸುತ್ತಿರುವ ಅವರ ರಾಜಕೀಯ ಪ್ರಭಾವವನ್ನ ಬಲಪಡಿಸೋದು ಕೂಡ ಆಗಿತ್ತು ಅಂತ ಪಾಲಿಸಿ ರಿಸರ್ಚ್ ಗ್ರೂಪ್​ (POREG) ಹೇಳಿದೆ. ಒಂದ್ಕಡೆ ಇಮ್ರಾನ್​ ಮತ್ತು ಪಾಕ್​ ಸೇನೆ ನಡುವೆ ಸಂಘರ್ಷ ನಡೀತಿದೆ, ಇಮ್ರಾನ್​ ಖಾನ್ ಕ್ಯಾಬಿನೆಟ್​​ನಲ್ಲೇ ಭಿನ್ನಾಭಿಪ್ರಾಯ ಇದೆ, ಅಫ್ಘನಿಸ್ತಾನ ಜೊತೆಗೆ ಗಡಿ ಸಂಘರ್ಷ, ಅಮೆರಿಕ ಜೊತೆಗಿನ ಹಗೆತನ ಹಾಗೂ ಹದಗೆಟ್ಟಿರೋ ಆರ್ಥಿಕ ಪರಿಸ್ಥಿತಿಗಳು ಕೂಡ ಇಮ್ರಾನ್​ ಖಾನ್​ ಚೀನಾ ಭೇಟಿಯಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಅಂತ ಪಾಲಿಸಿ ರಿಸರ್ಚ್ ಗ್ರೂಪ್​ ಹೇಳಿದೆ.

-masthmagaa.com

Contact Us for Advertisement

Leave a Reply