ಬೆಂಗಳೂರಿನ 23 ಲಕ್ಷ ಕಟ್ಟಡಗಳಿಗೆ ಕಂಟಕ! ಬಿಬಿಎಂಪಿ ನೋಟಿಸ್

masthmagaa.com:

ಬೆಂಗಳೂರಿನಲ್ಲಿರುವ 23 ಲಕ್ಷ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಈ ನೋಟಿಸ್‌ ಬಂದ ಏಳು ದಿನಗಳ ಒಳಗಾಗಿ ಕಟ್ಟಡ ನಿರ್ಮಾಣಕ್ಕೆ ಪಡೆದ ಅನುಮತಿ ಪತ್ರ, ಖಾತಾ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಯನ್ನು ಹತ್ತಿರದ ಬಿಬಿಎಂಪಿ ಕಚೇರಿಗೆ ಹೋಗಿ ನೀಡಬೇಕು ಅಂತ ಬಿಬಿಎಂಪಿ ತಿಳಿಸಿದೆ. ಒಂದು ವೇಳೆ ಕಟ್ಟಡ ಮಾಲೀಕರು ಮಾಹಿತಿ ನೀಡದೆ ಹೋದ್ರೆ ಕಟ್ಟಡವನ್ನ ಅವಶ್ಯಕತೆ ಬಿದ್ರೆ ತೆರವು ಗೊಳಿಸಲಾಗುತ್ತೆ ಅಂತ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಟ್ಟಡಗಳು ಉಳುರೋ ಘಟನೆಗಳು ಹೆಚ್ತಿರೋ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರವನ್ನ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply