ಕೊರೋನಾದಿಂದ ಮೃತಪಟ್ಟವರನ್ನ ಹೂಳಲು ಸ್ಮಶಾನದಿಂದ ಹಳೇ ಮೃತದೇಹ ತೆಗೆದ್ರು

masthmagaa.com:

ಬ್ರೆಜಿಲ್​ನಲ್ಲಿ ಕೊರೋನಾ ಹಾವಳಿ ಮಿತಿ ಮೀರಿ ಹೋಗಿದೆ. ಎಷ್ಟರಮಟ್ಟಿಗೆ ಅಂದ್ರೆ ಕೊರೋನಾದಿಂದ ಮೃತಪಟ್ಟವರನ್ನ ಹೂಳೋದಕ್ಕೆ ಜಾಗ ಕೂಡ ಇಲ್ಲದಂತಾಗಿದೆ. ಹೀಗಾಗಿ ಸಾವೋ ಪೌಲೋ ಸೇರಿದಂತೆ ಹಲವೆಡೆ ಸ್ಮಶಾನವನ್ನ ಖಾಲಿ ಮಾಡುವ ಕೆಲಸ ನಡೀತಿದೆ. ಅಂದ್ರೆ ಒಂದು ಸ್ಮಶಾನದಲ್ಲಿ ಹೂತಿರೋ ಮೃತದೇಹಗಳನ್ನ ತೆಗೆದು ಬ್ಯಾಗಿಗೆ ತುಂಬಿಕೊಂಡು ಬೇರೆಕಡೆ ಸ್ಥಳಾಂತರ ಮಾಡುವ ಕೆಲಸ ಆಗ್ತಿದೆ. ಇದಕ್ಕೆಲ್ಲಾ ಕಾರಣ ಬ್ರೆಜಿಲ್​ನಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಜನ ಕೊರೋನಾದಿಂದ ಮೃತಪಡುತ್ತಿದ್ದಾರೆ. ಪ್ರತಿದಿನ ಅಷ್ಟು ಜನರನ್ನ ಹೂಳೋಕೆ ಜಾಗದ ಸಮಸ್ಯೆ ಉಂಟಾಗಿರೋದಕ್ಕೆ ಹೀಗೆ ಮಾಡಲಾಗ್ತಿದೆ. ಆದ್ರೆ ವರ್ಷಗಳ ಹಿಂದೆ ಹೂತ ಮೃತದೇಹಗಳನ್ನ ಬೇರೊಂದು ಸ್ಥಳಕ್ಕೆ ಶಿಫ್ಟ್ ಮಾಡೋದು ಸಾಮಾನ್ಯ ಪ್ರಕ್ರಿಯೆ. ಅದರಲ್ಲೇನೂ ವಿಶೇಷತೆ ಇಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply