ಅಫ್ಘನಿಸ್ತಾನದ ಆರೋಗ್ಯ ಕಾರ್ಯಕರ್ತರಿಗೆ ವೇತನ ನೀಡಿದ ವಿಶ್ವಸಂಸ್ಥೆ

masthmagaa.com:

ಅಫ್ಘನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರೋ ತಾಲಿಬಾನಿಗಳು ದುಡ್ಡಿಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಅಫ್ಘನಿಸ್ತಾನದಲ್ಲಿ ಕೆಲಸ ಮಾಡ್ತಿರೋ ಆರೋಗ್ಯ ಕಾರ್ಯಕರ್ತರಿಗೆ ವಿಶ್ವಸಂಸ್ಥೆಯೇ ಸ್ಯಾಲರಿ ನೀಡಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 23,500 ಆರೋಗ್ಯ ಕಾರ್ಯರ್ತರಿಗೆ 8 ಮಿಲಿಯನ್​ ಡಾಲರ್​ ವೇತನ ನೀಡಲಾಗಿದೆ ಅಂತ ವಿಶ್ವಸಂಸ್ಥೆ ಹೇಳಿದೆ. 8 ಮಿಲಿಯನ್ ಡಾಲರ್ ಅಂದ್ರೆ ಆರು ಸಾವಿರ ಕೋಟಿ ರೂಪಾಯಿ ಆಗುತ್ತೆ. ಈ ಬಗ್ಗೆ ಮಾತನಾಡಿರೋ ಏಷ್ಯಾ ಅಂಡ್​ ಫೆಸಿಫಿಕ್​ ಭಾಗದ ಯುಎನ್​ಡಿಪಿ ರೀಜನಲ್​ ಡೈರೆಕ್ಟರ್​ ಕನ್ನಿ ವಿಗ್ನರಾಜಾ, ನಾವು ಕೊಲ್ಯಾಪ್ಸ್ ಆಗ್ತಿರೋ ಆರೋಗ್ಯ ವ್ಯವಸ್ಥೆಯನ್ನ ಮಾತ್ರ ಮೇಲಕ್ಕೆತ್ತಲು ಪ್ರಯತ್ನ ಪಡ್ತಿಲ್ಲ. ಬದಲಾಗಿ ಅಫ್ಘನಿಸ್ತಾನದ ಆರ್ಥವ್ಯವಸ್ಥೆ ಕೂಡ ಕೊಲ್ಯಾಪ್ಸ್ ಆಗ್ತಿದೆ. ಅದನ್ನ ಕೂಡ ಮೆಲಕ್ಕೆತ್ತುವ ಪ್ರಯತ್ನ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply