ಮಾಲ್ಡೀವ್ಸ್‌ಗೆ ಕಷ್ಟ ಬಂದಾಗ ಮೊದಲು ಸಹಾಯ ಮಾಡೋದೆ ಭಾರತ! ಹೇಳಿದ್ಯಾರು?

masthmagaa.com:

ನಮಗೆ ಯಾವುದೇ ರೀತಿ ತುರ್ತು ಪರಿಸ್ಥಿತಿ ಎದುರಾದಾಗ ಮೊದಲು ಸಹಾಯಕ್ಕೆ ಬರೋದು ಭಾರತ ಅಂತ ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್‌ ಅವ್ರು ಹಾಡಿ ಹೊಗಳಿದ್ದಾರೆ. 1988ರಲ್ಲಿ ಮಾಲ್ಡೀವ್ಸ್‌ನಲ್ಲಿ ಉಂಟಾಗಿದ್ದ ಗಲಭೆಯಿಂದ ಹಿಡಿದು ಕೋವಿಡ್‌ ಪ್ಯಾಂಡೆಮಿಕ್‌ವರೆಗೂ ಭಾರತ ನಮಗೆ ಸಹಾಯ ಮಾಡಿದೆ. ಮಾಲ್ಡೀವ್ಸ್‌ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕೋವಿಡ್‌ ವ್ಯಾಕ್ಸಿನ್‌ ಪೂರೈಕೆ ಮಾಡಿದ್ದ ಭಾರತದ ಮೇಲೆ ಅಪಾರ ಪ್ರೀತಿ ಹಾಗೂ ಗೌರವವಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ನೈಬರ್ಸ್‌ ಫಸ್ಟ್‌ ಪಾಲಿಸಿಯಯಿಂದ ಮಾಲ್ಡೀವ್ಸ್‌ಗೆ ಸಾಕಷ್ಟು ಎನ್‌ಕರೇಜ್‌ಮೆಂಟ್‌ ಸಿಕ್ಕಿದೆ. ಹೀಗಾಗಿ ಮಾಲ್ಡೀವ್ಸ್‌ ಅಧ್ಯಕ್ಷ ಸೋಲಿಹ್‌ ಅವ್ರು ತಮ್ಮ ವಿದೇಶಾಂಗ ನೀತಿಯಲ್ಲಿ ಭಾರತ ಫಸ್ಟ್‌ ಅನ್ನೋ ನೀತಿಯನ್ನ ಅನುಸರಿಸುತ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಅಬ್ದುಲ್ಲಾ ಹೇಳಿದ್ದಾರೆ. ಇದೇ ವೇಳೆ ಚೀನಾವನ್ನ ಉಲ್ಲೇಖಿಸಿ, ಮಾಲ್ಡೀವ್ಸ್‌ ಯಾರಿಗೂ ಯುದ್ಧ ಭೂಮಿಯಾಗಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಭಾರತ ಹಾಗೂ ಚೀನಾ ಮೊದ್ಲಿನಿಂದಲೂ ಮಾಲ್ಡೀವ್ಸ್‌ನಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸ್ಪರ್ಧೆ ನಡೆಸುತ್ತಿವೆ.

-masthmagaa.com

Contact Us for Advertisement

Leave a Reply