ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನ ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ: ಸೋನಿಯಾ ಗಾಂಧಿ

masthmagaa.com:

ಕೇಂದ್ರ ಸರ್ಕಾರದ ವಿರುದ್ದ ತಿರುಗಿ ಬಿದ್ದಿರೋ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ʻಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನ ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಅಂತ ಆರೋಪಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಧೋರಣೆಯ ವಿರುದ್ದ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ʻಕಳೆದ 75 ವರ್ಷಗಳಲ್ಲಿ ನಾವು ಮಹತ್ವದ ಸಾಧನೆಗಳನ್ನ ಮಾಡಿದ್ದೇವೆ. ಆದರೆ ಈಗಿನ ಸ್ವಾರ್ಥ ಪರ ಸರ್ಕಾರ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಧನೆಯನ್ನ ಕಡೆಗಣಿಸ್ತಿದೆ. ಅದನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಕಾಂಗ್ರೆಸ್‌ ಇದನ್ನ ತೀವ್ರವಾಗಿ ಖಂಡಸುತ್ತೆʼ ಅಂತ ಆಕ್ರೋಶ ಹೊರಹಾಕಿದ್ದಾರೆ. ಅಂದ್ಹಾಗೆ ಬಿಜೆಪಿ, ತನ್ನ ಪ್ರಕಾರ 1947ರಲ್ಲಿ ದೇಶ ವಿಭಜನೆಗೆ ಕಾರಣವಾದ ಘಟನೆಗಳ ವಿಡಿಯೋ ಒಂದನ್ನ ಬಿಡುಗಡೆಗೊಳಿಸಿತ್ತು. ಅದ್ರಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರನ್ನ ಅಂದ್ರೆ ನೆಹರು ಅವರನ್ನ ಕೂಡ ನೇರವಾಗಿ ಆರೋಪಿಸಲಾಗಿತ್ತು. ವಿಡಿಯೋದಲ್ಲಿ ಜವಾಹರ ಲಾಲ್‌ ನೆಹರೂ ಹಾಗೂ ಮೊಹಮ್ಮದ್‌ ಅಲಿ ಜಿನ್ನಾ ಅವ್ರ ಫೋಟೊಗಳು ಕೂಡ ಇದ್ವು. ಹೀಗಾಗಿ ಕಾಂಗ್ರೆಸ್‌, ಬಿಜೆಪಿಯ ಈ ಕ್ರಮವನ್ನ ಕರುಣಾಜನಕ ಅಂತ ಬಣ್ಣಿಸಿ ಆಕ್ರೋಶ ಹೊರಹಾಕಿದೆ.

-masthmagaa.com

Contact Us for Advertisement

Leave a Reply