ಭಾರತಕ್ಕೆ ಅಗ್ಗದ ಬೆಲೆಯಲ್ಲಿ ಚೀನಾದ ಅಲುಮಿನಿಯಮ್‌ ಫಾಯಿಲ್‌ ಮಾರಾಟ!

masthmagaa.com:

ಫುಡ್‌ ಪ್ಯಾಕೇಜಿಂಗ್‌ನಲ್ಲಿ ಅತಿ ಹೆಚ್ಚು ಬಳಸಲಾಗೋ ಅಲುಮೀನಿಯಮ್‌ ಫಾಯ್ಲ್‌ನ್ನ (Aluminium Foil) ಚೀನಾ ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡ್ತಿದೆ ಅಂತ ಭಾರತದ ಕೆಲ ಕಂಪನಿಗಳು ಆರೋಪಿಸಿವೆ. ಇದ್ರಿಂದ ಭಾರತದ ದೇಶೀಯ ಕಂಪನಿಗಳಿಗೆ ಹೊಡೆತ ಬೀಳ್ತಿವೆ ಅಂತ ಕಳವಳ ವ್ಯಕ್ತ ಪಡಿಸಿವೆ. ಸೋ ಇದೀಗ ಡೈರೆಕ್ಟರೇಟ್‌ ಜನರಲ್‌ ಆಫ್‌ ಟ್ರೇಡ್‌ ರೆಮಿಡೀಸ್‌ (DGTR) ಈ ಬಗ್ಗೆ ತನಿಖೆಗೆ ಮುಂದಾಗಿದೆ. ಕಡಿಮೆ ಬೆಲೆಯ ಚೀನಾ ಅಲುಮೀನಿಯಮ್‌ ಫಾಯ್ಲ್‌ಗಳಿಗೆ ಅಂಟಿ-ಡಂಪಿಂಗ್‌ ತೆರಿಗೆ ವಿಧಿಸೋ ಬಗ್ಗೆ ಚಿಂತಿಸ್ತಿದೆ ಅಂತೇಳಲಾಗಿದೆ. ಇದೇನಂದ್ರೆ ಇತರೆ ದೇಶಗಳು ಕಡಿಮೆ ಬೆಲೆಯಲ್ಲಿ ತಮ್ಮ ಪ್ರಾಡಕ್ಟ್‌ಗಳನ್ನ ಎಕ್ಸ್‌ಪೋರ್ಟ್‌ ಮಾಡಿದ್ರೆ.. ಅವುಗಳಿಂದ ಭಾರತದ ದೇಶೀಯ ಮಾರುಕಟ್ಟೆಗೆ ಹೊಡೆತ ಬಿದ್ರೆ ಆಂಟಿ ಡಂಪಿಂಗ್‌ ತೆರಿಗೆ ವಿಧಿಸಲಾಗುತ್ತೆ. ದೇಶೀಯ ಕಂಪನಿಗಳಿಗೆ ಹೊಡೆತ ಬೀಳೋದನ್ನ ತಪ್ಪಿಸಲಾಗುತ್ತೆ.

-masthmagaa.com

Contact Us for Advertisement

Leave a Reply