2020ರ ಗಲ್ವಾನ್‌ ಸಂಘರ್ಷದ ನಂತರ ಚೀನಾ ಹಾಗೂ ಭಾರತ ಹಲವು ಸ್ಥಳಗಳಲ್ಲಿ ತಟಸ್ಥ!

masthmagaa.com:

2020ರಲ್ಲಿ ನಡೆದ ಗಲ್ವಾನ್‌ ಸಂಘರ್ಷದ ಬಳಿಕ ಪೂರ್ವ ಲಡಾಖ್‌ನ ಹಲವು ಪಾಯಿಂಟ್‌ಗಳಲ್ಲಿ ಚೀನಾ ಹಾಗೂ ಭಾರತ ಗಸ್ತು ತಿರಗ್ತಾಯಿಲ್ಲ ಅಂತ ಸರ್ಕಾರದ ಮೂಲಗಳು ಹೇಳಿವೆ. ಗಲ್ವಾನ್‌ ಸಂಘರ್ಷದ ಬಳಿಕ ಉಭಯ ದೇಶಗಳು ಮಾತುಕತೆ ವೇಳೆ ಹಲವು ಪಾಯಿಂಟ್‌ಗಳಿಂದ ಹಿಂದೆ ಸರಿಯೋಕೆ ಒಪ್ಪಿದ್ವು. ಅಂದಿನಿಂದ ಒಪ್ಪಂದದಂತೆ ಉಭಯ ದೇಶಗಳು ಪ್ಯಾಟ್ರೋಲಿಂಗ್‌ ಮಾಡಿಲ್ಲ ಅಂತ ಹೇಳಲಾಗಿದೆ. ಅಲ್ದೇ ಎರಡು ದೇಶಗಳ ನಡುವೆ ಗಡಿ ವಿಷಯವಾಗಿ ಉಳಿದಿರೋ ಕೆಲ ಬಿಕ್ಕಟ್ಟುಗಳ ಬಗ್ಗೆ ಮಾತುಕತೆ ನಡೆಸುತ್ತಿವೆ ಅಂತ ರಕ್ಷಣಾ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply