ವಿದೇಶಿ ಲಸಿಕೆಗಳಿಗೆ ಭಾರತ ಅಸ್ತು! ಸ್ಪುಟ್ನಿಕ್ ಲಸಿಕೆ ರೇಟ್ ಎಷ್ಟು..?

masthmagaa.com:

ಆತ್ಮನಿರ್ಭರ್ ಭಾರತ್ ಸ್ಲೋಗನ್​​ನಡಿ ಆರಂಭದಲ್ಲಿ ಸ್ವದೇಶಿ ನಿರ್ಮಿತ ಲಸಿಕೆಗೆ ಒತ್ತು ನೀಡಿದ್ದ ಭಾರತ ಈಗ ಎಲ್ಲಾ ವಿದೇಶಿ ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲು ಮುಂದಾಗಿದೆ ಅಂತ ಗೊತ್ತಾಗಿದೆ. ಜಾನ್ಸನ್ & ಜಾನ್ಸನ್, ಜೈಡಸ್ ಕ್ಯಾಡಿಲಾ, ಸೀರಂನ ನೋವಾವ್ಯಾಕ್ಸ್​ ಮತ್ತು ಭಾರತ್ ಬಯೋಟೆಕ್​ನ ಮೂಗಿಗೆ ಹಾಕುವ ವ್ಯಾಕ್ಸಿನ್​ಗೂ ಸದ್ಯದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ. ಭಾರತ ಆರಂಭದಲ್ಲಿ ಹಲವು ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಿದ್ರೂ ಈಗ ಲಸಿಕೆ ಕೊರತೆ ಎದುರಾಗಿದೆ. ಮಹಾರಾಷ್ಟ್ರ, ಪಂಜಾಬ್​​, ದೆಹಲಿ. ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಲಸಿಕೆ ಸ್ಟಾಕ್ ಇಲ್ಲ ಅಂತ ರಾಜ್ಯ ಸರ್ಕಾರಗಳು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದವು. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಇನ್ನು ನಿನ್ನೆಯಷ್ಟೇ ರಷ್ಯಾದ ಸ್ಪುಟ್ನಿಕ್ 5 ಲಸಿಕೆ ಸೇಫ್ ಎಂದು ತಜ್ಞರು ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ, ಇವತ್ತು ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಸ್ಪುಟ್ನಿಕ್ 5ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಈ ಲಸಿಕೆ ಲಭ್ಯವಾಗಲಿದೆ. ಭಾರತದಲ್ಲಿ ಈ ಲಸಿಕೆಯನ್ನು 5 ಫಾರ್ಮಾ ಸಂಸ್ಥೆಗಳು ಉತ್ಪಾದಿಸಲಿದ್ದು, ವರ್ಷಾಂತ್ಯಕ್ಕೆ 85 ಕೋಟಿ ಲಸಿಕೆ ಉತ್ಪಾದನೆಯಾಗೋ ಗುರಿ ಇದೆ.

ಆದ್ರೆ ರಷ್ಯಾದ ಸ್ಪುಟ್ನಿಕ್ 5 ಲಸಿಕೆಯ ರೇಟ್ ಎಷ್ಟಿರುತ್ತೆ ಅನ್ನೋದು ದೊಡ್ಡ ವಿವಾದದ ವಿಚಾರ ಆಗ್ತಿದೆ. ಯಾಕಂದ್ರೆ ಅಂತಾರಾಷ್ಟ್ರೀಯ ಮಾರ್ಕೆಟ್​​ನಲ್ಲಿ ಸ್ಪುಟ್ನಿಕ್​ 5ಗೆ ಒಂದು ಡೋಸ್​ಗೆ 750 ರೂಪಾಯಿ ಇದೆ. ಆದ್ರೆ ಭಾರತದಲ್ಲಿ ಸದ್ಯ ಬಳಕೆಯಲ್ಲಿರೋ ಎರಡೂ ಲಸಿಕೆಗಳ ರೇಟು 250 ರೂಪಾಯಿ ಫಿಕ್ಸ್ ಮಾಡಲಾಗಿದೆ. ಈ ಬಗ್ಗೆ ಮಾತಾಡಿರೋ ಸ್ಪುಟ್ನಿಕ್​ 5 ಕಂಡುಹಿಡಿದಿರೋ ರಷ್ಯಾದ ಆರ್​ಡಿಐಎಫ್​​, ನಮಗೆ ಅಷ್ಟು ಕಮ್ಮಿ ರೇಟಿಗೆ ಕೊಡಕ್ಕಾಗಲ್ಲ ಅಂದಿದೆ. ನಮಗೆ ಭಾರೀ ಲಾಭ ಬರ್ಲಿ ಅಂತ ಕಾಯ್ತಿಲ್ಲ. ಬದಲಿಗೆ ಅಟ್​​ಲೀಸ್ಟ್ ಹಾಕಿದ ದುಡ್ದಾದ್ರೂ ಬರ್ಬೇಕಲ ಅಂತ ಹೇಳಿದ್ದಾರೆ ಆರ್​ಡಿಐಎಫ್​ನ ಕಿರಿಲ್ ಡಿಮಿಟ್ರೀ.

-masthmagaa.com

Contact Us for Advertisement

Leave a Reply