ಭಾರತದ ಗೃಹ ನಿರ್ಮಾಣ ಯೋಜನೆಗೆ ಶ್ಲಾಘಿಸಿದ ಶ್ರೀಲಂಕಾ!

masthmagaa.com:

ಶ್ರೀಲಂಕಾದಲ್ಲಿ ಭಾರತ ಸಹಯೋಗದ ಗೃಹನಿರ್ಮಾಣ ಯೋಜನೆ ʻಭಾರತ್‌-ಲಂಕಾʼದ ನಾಲ್ಕನೇ ಹಂತದ ಕಾಮಗಾರಿ ಶುರುವಾಗಿದೆ. ಈ ಯೋಜನೆಯಲ್ಲಿ ಲಂಕಾದ ಪ್ಲಾಂಟೇಶನ್‌ ಸೆಕ್ಟರ್‌ನ ಕಾರ್ಮಿಕರಿಗಾಗಿ 10 ಸಾವಿರ ಮನೆಗಳನ್ನ ನಿರ್ಮಿಸಲಾಗ್ತಿದೆ. ಇದರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಲಂಕಾ ಪ್ರೆಸಿಡೆಂಟ್‌ ರನಿಲ್‌ ವಿಕ್ರಮಸಿಂಘೆ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. ಈ ಪ್ರಾಜೆಕ್ಟ್‌ಗೆ ಭಾರತ ಸಪೋರ್ಟ್‌ ಮಾಡಿದೆ. ಭಾರತ ಸರ್ಕಾರಕ್ಕೆ ನಾನು ಧನ್ಯವಾದ ಹೇಳ್ತೇನೆ. ತಮಿಳು ಜನರು ಲಂಕಾದ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಆದ್ರೆ ಅವರಿಗೆ ಇಲ್ಲಿ ಭೂಮಿ ಹಾಗೂ ಮನೆಯ ಓನರ್‌ಶಿಪ್‌ ಇಲ್ಲದೆ ಬಹಳಷ್ಟು ಕಷ್ಟವಾಗಿದೆ. ಈ ಯೋಜನೆಯಿಂದ ಅವರಿಗೆ ಬಹಳಷ್ಟು ನೆರವಾಗಲಿದೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply