2ನೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ.. ರಹಾನೆ ಶತಕ

masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ನ ಎರಡನೇ ದಿನದ ಆಟ ಮುಗಿದಿದ್ದು, ಆಸೀಸ್ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ನಿನ್ನೆ 36 ರನ್​ಗೆ 1 ವಿಕೆಟ್​ ಕಳೆದುಕೊಂಡಿದ್ದ ಭಾರತ ಇವತ್ತು 277 ರನ್​ಗೆ 5 ವಿಕೆಟ್​​ ಕಳೆದುಕೊಂಡಿದೆ. ಟೀಂ ಇಂಡಿಯಾ ಪರ ನಾಯಕ ಅಜಿಂಕ್ಯ ರಹಾನೆ ಭರ್ಜರಿ ಶತಕ ಸಿಡಿಸಿ ಮಿಂಚಿದ್ರು. ಟೆಸ್ಟ್ ಕ್ರಿಕೆಟ್​​ನಲ್ಲಿ ಇದು ಅವರ 12ನೇ ಸೆಂಚುರಿ. ನಾಯಕನಿಗೆ ಉತ್ತಮ ಸಾಥ್ ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ 40 ರನ್​ ಸಿಡಿಸಿದ್ರು. ಇಬ್ಬರೂ ಕೂಡ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 82 ರನ್ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್​ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್​ ಪಡೆದ್ರು. ಮತ್ತೊಂದುಕಡೆ ಆಸ್ಟ್ರೇಲಿಯಾ ನಾಯಕ ಮತ್ತು ವಿಕೆಟ್​ ಕೀಪರ್ ಟಿಮ್ ಪೇನ್ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 150 ಔಟ್​ ಮಾಡಿದ ದಾಖಲೆ ಮಾಡಿದ್ರು. ಈ ಮೂಲಕ ದಕ್ಷಿಣ ಆಫ್ರಿಕಾ ವಿಕೆಟ್​ ಕೀಪರ್ ಕ್ವಿಂಟನ್ ಡಿಕಾಕ್ ಅವರ ದಾಖಲೆ ಮುರಿದ್ರು. ಡಿಕಾಕ್ 34 ಇನ್ನಿಂಗ್ಸ್​ನಲ್ಲಿ 150 ಡಿಸ್​ಮಿಸಲ್ ಮಾಡಿದ್ರೆ, ಟಿಮ್ ಪೇನ್​ 33 ಇನ್ನಿಂಗ್ಸ್​ನಲ್ಲಿ ಈ ದಾಖಲೆ ಬರೆದ್ರು.

-masthmagaa.com

Contact Us for Advertisement

Leave a Reply