ಭಾರತ, ಮಾಲ್ಡೀವ್ಸ್‌, ಶ್ರೀಲಂಕಾಗಳ “DOSTI-16” ನೌಕಾ ಸಮರಾಭ್ಯಾಸ!

masthmagaa.com:

ಭಾರತ, ಮಾಲ್ಡೀವ್ಸ್‌ ಹಾಗೂ ಶ್ರೀಲಂಕಾ ನೌಕಾಪಡೆಗಳು ಹಿಂದೂ ಮಹಾ ಸಾಗರದಲ್ಲಿ 4 ದಿನಗಳ “DOSTI-16” ಹೆಸರಿನ ತ್ರಿಪಕ್ಷೀಯ ಜಂಟಿ ನೌಕಾ ಸಮರಾಭ್ಯಾಸ ನಡೆಸಿವೆ. ಕಡಲ ತೀರದಲ್ಲಿ ಭದ್ರತೆ ಹಾಗೂ 3 ದೇಶಗಳ ಸಹಕಾರ ವೃದ್ದಿಗಾಗಿ ಫೆಬ್ರುವರಿ 22 ರಿಂದ 25 ವರೆಗೆ ಈ ಸಮರಾಭ್ಯಾಸ ನಡೆಸಿವೆ. ಈ ಬಗ್ಗೆ ಸ್ವತಃ ಭಾರತದ ಕೋಸ್ಟ್‌ ಗಾರ್ಡ್‌ ಮತ್ತು ಮಾಲ್ಡೀವ್ಸ್‌ ರಕ್ಷಣಾ ಪಡೆ ಕೂಡ ಮಾಹಿತಿ ನೀಡಿವೆ. ಇನ್ನು ಭಾರತದ ಕೋಸ್ಟ್‌ ಗಾರ್ಡ್‌ನ ಸಮರ್ಥ್‌, ICGS ಅಭಿನವ ನೌಕೆ, ಶ್ರೀಲಂಕಾದ ಸಮುದ್ರಾ ನೌಕೆಗಳ ಜೊತೆ ಬಾಂಗ್ಲಾದೇಶದ ವೀಕ್ಷಕರು ಸಹ ಮಾಲ್ಡೀವ್ಸ್‌ ಸಮೀಪದ ಹಿಂದೂ ಮಹಾ ಸಾಗರ ಪ್ರದೇಶಕ್ಕೆ ರೀಚ್‌ ಆದ್ರು. ಇವ್ರಿಗೆಲ್ಲ ಮಾಲ್ಡೀವ್ಸ್‌ ಸ್ವಾಗತಿಸಿದೆ. ಈ ವಿಚಾರವನ್ನ ಖುದ್ದು ಮಾಲ್ಡೀವ್ಸ್‌ನ ರಾಷ್ಟ್ರೀಯ ರಕ್ಷಣಾ ಪಡೆ ಎಕ್ಸ್‌ನಲ್ಲಿ ತಿಳಿಸಿದೆ.

-masthmagaa.com

Contact Us for Advertisement

Leave a Reply